ಬೀದರ್: ಮಕ್ಕಳನ್ನು ಆಕರ್ಷಿಲು ಶಾಲೆಯನ್ನು ರೈಲು ಗಾಡಿಯಂತೆ ಪೇಂಟ್ ಮಾಡಿಸಿದ ಮುಖ್ಯ ಶಿಕ್ಷಕ
ಸರ್ಕಾರೀ ಶಾಲೆಗಳಿಗೆ ಬೇರೆ ಸವಲತ್ತುಗಳೂ ಬೇಕಾಗುತ್ತವೆ. ಶಾಲೆಯ ಮುಂದೆ ದೊಡ್ಡ ಮೈದಾನವಿದೆ, ಅದರೆ ಆಟಕ್ಕಾಗಿ ಉಪಕರಣಗಳಿಲ್ಲ, ಮಕ್ಕಳು ಒಂದು ಗ್ರಾಮ್ಯ ಆಟವಾಡುತ್ತಿದ್ದರೆ. ಖಾಸಗಿ ಶಾಲೆಗಳಲ್ಲಿ ನೋಡಸಿಗುವ ಉಪಕರಣಗಳ ವ್ಯವಸ್ಥೆ ಸರ್ಕಾರೀ ಶಾಲೆಗಳಿಗೂ ಮಾಡಿದರೆ ಮಕ್ಕಳು ಅಕರ್ಷಿತರಾಗೋದ್ರಲ್ಲಿ ಎರಡು ಮಾತಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ರಾಮಗಳಲ್ಲಿರುವ ಸರ್ಕಾರೀ ಶಾಲೆಗಳ ಗಮನ ಹರಿಸಿದರೆ ಎಲ್ಲ ಸಾಧ್ಯವಾಗುತ್ತದೆ.
ಬೀದರ್, ಜುಲೈ 2: ಬೀದರ್ ತಾಲೂಕಿನ ನವಲಸಪುರ ಗ್ರಾಮದಲ್ಲಿರುವ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು (head master) ಪ್ರಭು ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸಲು ಮಾಡಿರುವ ಪ್ರಯತ್ನ ಶ್ಲಾಘನೀಯ ಮತ್ತು ಅಭಿನಂದನೀಯ. ಪ್ರಭು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯನ್ನು ರೈಲುಗಾಡಿಯನ್ನು ಹೋಲುವಂತೆ ಪೇಂಟ್ ಮಾಡಿಸಿದ್ದಾರೆ, ಕ್ಲಾಸ್ ರೂಮ್ ಗಳು ಬೋಗಿಗಳ ಹಾಗೆ ಕಾಣಿಸುತ್ತಿವೆ. ನವಲಸಪುರ ಗ್ರಾಮದ ಜನಸಂಖ್ಯೆ ಎಷ್ಟು ಅಂತ ಗೊತ್ತಿಲ್ಲ, ಆದರೆ ಸರ್ಕಾರೀ ಶಾಲೆಗೆ ಬರುವ ಮಕ್ಕಳ ಸಂಖ್ಯೆ ತೀರ ಕಮ್ಮಿ. ಇದನ್ನು ಅರ್ಥಮಾಡಿಕೊಂಡೇ ಮುಖ್ಯೋಪಾಧ್ಯಾಯ ಪ್ರಭು ಹೊಸ ಪ್ರಯೋಗವನ್ನು ಮಾಡಿದ್ದಾರೆ.
ಇದನ್ನೂ ಓದಿ: Video: ಅಯ್ಯೋ ಪಾಪ… ಶಾಲೆಯ ಮೆಟ್ಟಿಲ ಮೇಲೆ ಕುಳಿತು ತೂಕಡಿಸಿದ ಪುಟಾಣಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos