Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
ಜುಲೈ 3ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಈ ದಿನ ಉತ್ತಮ ಫಲಿತಾಂಶಗಳಿವೆ ಎಂದು ಹೇಳಲಾಗಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ ಎಂದು ತಿಳಿಸಲಾಗಿದೆ. ಪ್ರತಿಯೊಂದು ರಾಶಿಗೆ ಸೂಕ್ತವಾದ ಸಲಹೆಗಳನ್ನೂ ನೀಡಲಾಗಿದೆ.
ಬೆಂಗಳೂರು, ಜುಲೈ 03: ವಿಶ್ವಾವಸಂನಾಮ ಸಂವತ್ಸರ, ಉತ್ತರಾಯಣ, ಆಷಾಡ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ ಅಷ್ಟಮಿ, ಹಸ್ತ ನಕ್ಷತ್ರ, ಪರೀಘ ಯೋಗ ಮತ್ತು ಭವಕರಣ. ಮೇಷ ರಾಶಿಯವರಿಗೆ ರಾಶ್ಯಾಧಿಪತಿಯಾದ ಕುಜ ಸಿಂಹ ರಾಶಿಯಲ್ಲಿದ್ದು, ಚಂದ್ರ ಕನ್ಯಾ ರಾಶಿಯ ಆರನೇ ಮನೆಯಲ್ಲಿ ಹಸ್ತ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಇದರಿಂದ ಏಳು ಗ್ರಹಗಳ ಶುಭಫಲವಿದೆ. ಸಂಕಲ್ಪಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ, ಮಾನಸಿಕ ಯಾತನೆ ಕಡಿಮೆಯಾಗುತ್ತದೆ ಮತ್ತು ಕುಟುಂಬದಲ್ಲಿ ಸಹಕಾರ ಹೆಚ್ಚಾಗುತ್ತದೆ. ಆದರೆ, ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕತೆ ಅಗತ್ಯ. ವಾಹನ ಚಾಲಕರು, ಪ್ರಯಾಣಿಕರು ಮತ್ತು ವ್ಯಾಪಾರಸ್ಥರಿಗೆ ಈ ದಿನ ಶುಭಕರ.
Latest Videos