AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಆಕಾಶ್​ಗೆ ಸತತ 2 ವಿಕೆಟ್; ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ 77/3

India vs England 2nd Test Day 2: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತದ ಅದ್ಭುತ ಪ್ರದರ್ಶನ ಕಂಡುಬಂತು. ಶುಭ್ಮನ್ ಗಿಲ್ ಅವರ ಅದ್ಭುತ ದ್ವಿಶತಕದ ನೆರವಿನಿಂದ ಭಾರತ ತಂಡವು 587 ರನ್‌ಗಳಿಗೆ ಆಲೌಟ್ ಆಯಿತು. 2ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರ ನಡುವೆ ನಾಲ್ಕನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟ ಕಂಡುಬಂದಿತು.

IND vs ENG: ಆಕಾಶ್​ಗೆ ಸತತ 2 ವಿಕೆಟ್; ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ 77/3
Ind Vs Eng
ಪೃಥ್ವಿಶಂಕರ
|

Updated on:Jul 03, 2025 | 11:24 PM

Share

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ (India vs England 2nd Test) ಪಂದ್ಯದ ಎರಡನೇ ದಿನದಾಟ ಕೊನೆಗೊಂಡಿದೆ. ಎರಡನೇ ದಿನ ಭಾರತದ ಮೊದಲ ಇನ್ನಿಂಗ್ಸ್ 587 ರನ್‌ಗಳಿಗೆ ಅಂತ್ಯವಾಗಿದ್ದು, ಇಂಗ್ಲೆಂಡ್‌ನ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಆದಾಗ್ಯೂ, ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ನಾಲ್ಕನೇ ವಿಕೆಟ್‌ಗೆ 52 ರನ್‌ಗಳನ್ನು ಹಂಚಿಕೊಳ್ಳುವ ಮೂಲಕ ಇಂಗ್ಲೆಂಡ್‌ನ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ದಿನದಾಟದ ಅಂತ್ಯದ ವೇಳೆಗೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳಿಗೆ 77 ರನ್‌ಗಳನ್ನು ಗಳಿಸಿದ್ದು, ಇನ್ನೂ ಭಾರತಕ್ಕಿಂತ 510 ರನ್‌ಗಳ ಹಿನ್ನಡೆಯಲ್ಲಿದೆ. ಬ್ರೂಕ್ ಅಜೇಯ  30 ರನ್‌ ಮತ್ತು ರೂಟ್ ಅಜೇ 18 ರನ್‌ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇತ್ತ ಭಾರತದ ಪರ ಆಕಾಶ್ ದೀಪ್ (Akash Deep) 2 ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದ್ದಾರೆ.

587 ರನ್‌ಗಳಿಗೆ ಭಾರತ ಆಲೌಟ್

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತದ ಮೊದಲ ಇನ್ನಿಂಗ್ಸ್ 587 ರನ್‌ಗಳಿಗೆ ಅಂತ್ಯವಾಯಿತು. ತಂಡದ ಪರ ನಾಯಕ ಶುಭ್​ಮನ್ ಗಿಲ್ 269 ರನ್ ಬಾರಿಸಿದರು. ಗಿಲ್ ಹೊರತುಪಡಿಸಿ, ರವೀಂದ್ರ ಜಡೇಜಾ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ ಅರ್ಧಶತಕ ಸಿಡಿಸಿದರು. ಈ ಮೂವರ ಇನ್ನಿಂಗ್ಸ್ ಇಂಗ್ಲೆಂಡ್ ವಿರುದ್ಧ ಭಾರತ ದೊಡ್ಡ ಸ್ಕೋರ್ ಗಳಿಸಲು ಸಹಾಯ ಮಾಡಿತು. ಇಂಗ್ಲೆಂಡ್ ಪರ ಶೋಯಬ್ ಬಶೀರ್ ಮೂರು ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಜೋಶ್ ಟಂಗ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಬ್ರೈಡನ್ ಕಾರ್ಸ್, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ ಒಂದು ವಿಕೆಟ್ ಪಡೆದರು.

ಜಡೇಜಾ- ಸುಂದರ್ ಉಪಯುಕ್ತ ಇನ್ನಿಂಗ್ಸ್

ಎರಡನೇ ದಿನದಂದು ಐದು ವಿಕೆಟ್‌ಗಳಿಗೆ 310 ರನ್‌ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಭಾರತದ ಪರ ಗಿಲ್ ಮತ್ತು ಜಡೇಜಾ ಆರನೇ ವಿಕೆಟ್‌ಗೆ 203 ರನ್ ಸೇರಿಸಿದರು. ಆದಾಗ್ಯೂ ಜಡೇಜಾ 89 ರನ್ ಗಳಿಸಿ ಔಟಾಗುವುದರೊಂದಿಗೆ ಈ ಜತೆಯಾಟ ಮುರಿದುಬಿತ್ತು. ಇದರ ನಂತರ ಗಿಲ್, ವಾಷಿಂಗ್ಟನ್ ಸುಂದರ್ ಅವರೊಂದಿಗೆ ಇನ್ನಿಂಗ್ಸ್ ನಿಭಾಯಿಸಿ ತಮ್ಮ ವೃತ್ತಿಜೀವನದ ಮೊದಲ ದ್ವಿಶತಕ ಬಾರಿಸಿದರು. ಚಹಾ ವಿರಾಮದ ಮೊದಲು, ಸುಂದರ್ ರೂಪದಲ್ಲಿ ಭಾರತಕ್ಕೆ ಏಳನೇ ಹೊಡೆತ ಬಿದ್ದಿತು. ಸುಂದರ್ 42 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

IND vs ENG: ಶುಭ್​ಮನ್ ಗಿಲ್ ದ್ವಿಶತಕದಾಟಕ್ಕೆ ಕಿಂಗ್ ಕೊಹ್ಲಿಯ 4 ದಾಖಲೆಗಳು ಧ್ವಂಸ

13 ರನ್‌ಗಳಿಗೆ 3 ವಿಕೆಟ್ ಪತನ

ಚಹಾ ವಿರಾಮದ ನಂತರ, ಗಿಲ್ ಹೆಚ್ಚು ಹೊತ್ತು ಇನ್ನಿಂಗ್ಸ್ ಮುಂದುವರಿಸಲು ಸಾಧ್ಯವಾಗದೆ ಎಂಟನೇ ಬ್ಯಾಟ್ಸ್‌ಮನ್ ಆಗಿ ಔಟಾದರು. ಗಿಲ್ ಔಟಾದಾಗ, ಭಾರತದ ಸ್ಕೋರ್ 574 ರನ್‌ಗಳಾಗಿತ್ತು. ಭಾರತವು 13 ರನ್‌ಗಳ ಮಧ್ಯಂತರದಲ್ಲಿ ತನ್ನ ಮುಂದಿನ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ, ಆಕಾಶ್ ದೀಪ್ ಆರು ರನ್ ಗಳಿಸಿ ಔಟಾದರೆ, ಮೊಹಮ್ಮದ್ ಸಿರಾಜ್ ಎಂಟು ರನ್ ಗಳಿಸಿ ಔಟಾದರು. ಪ್ರಸಿದ್ಧ್ ಕೃಷ್ಣ ಐದು ರನ್ ಗಳಿಸಿ ಅಜೇಯರಾಗಿ ಮರಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Thu, 3 July 25

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು