- Kannada News Photo gallery Cricket photos Shubman Gill's Record-Breaking Double Century: 4 Kohli Records Broken!
IND vs ENG: ಶುಭ್ಮನ್ ಗಿಲ್ ದ್ವಿಶತಕದಾಟಕ್ಕೆ ಕಿಂಗ್ ಕೊಹ್ಲಿಯ 4 ದಾಖಲೆಗಳು ಧ್ವಂಸ
Shubman Gill's Record-Breaking Double Century: ಭಾರತೀಯ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 269 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಎಡ್ಜ್ಬಾಸ್ಟನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ಎಂಬ ದಾಖಲೆ ಸೇರಿದಂತೆ ವಿರಾಟ್ ಕೊಹ್ಲಿಯ ನಾಲ್ಕು ದಾಖಲೆಗಳನ್ನು ಮುರಿದಿದ್ದಾರೆ. ಇದು ಭಾರತೀಯ ಕ್ರಿಕೆಟ್‌ಗೆ ಹೊಸ ಅಧ್ಯಾಯವನ್ನು ತೆರೆದಿದೆ.
Updated on: Jul 03, 2025 | 9:42 PM

ಭಾರತೀಯ ಟೆಸ್ಟ್ ತಂಡದ ಹೊಸ ನಾಯಕನಾಗಿ ಶುಭ್ಮನ್ ಗಿಲ್ ಇಂಗ್ಲೆಂಡ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ದಾಖಲೆಗಳ ಸುರಿಮಳೆಗೈದಿದ್ದಾರೆ. ಲೀಡ್ಸ್ ಟೆಸ್ಟ್‌ನಲ್ಲಿ ನಾಯಕನಾಗಿ ಚೊಚ್ಚಲ ಶತಕ ಬಾರಿಸಿದ್ದ ಗಿಲ್, ಎಡ್ಜ್‌ಬಾಸ್ಟನ್ ಟೆಸ್ಟ್ನಲ್ಲೂ 269 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದಲ್ಲದೆ, ಕಿಂಗ್ ಕೊಹ್ಲಿಯ 4 ದಾಖಲೆಗಳನ್ನು ಮುರಿದರು.

ಎಡ್ಜ್‌ಬಾಸ್ಟನ್ ಮೈದಾನದಲ್ಲಿ, ಶುಭ್ಮನ್ ಗಿಲ್ ಪಂದ್ಯದ ಮೊದಲ ದಿನದಂದು ಗಳಿಸಿದ ಶತಕವನ್ನು ಸ್ಮರಣೀಯ ದ್ವಿಶತಕವನ್ನಾಗಿ ಪರಿವರ್ತಿಸಿ ಇತಿಹಾಸ ಸೃಷ್ಟಿಸಿದರು. ಈ ಸಮಯದಲ್ಲಿ, ಗಿಲ್ ಭಾರತೀಯ ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದಲ್ಲದೆ, ಈ ವಿಷಯದಲ್ಲಿ ಅವರು ತಮ್ಮ ಆರಾಧ್ಯ ದೈವ ವಿರಾಟ್ ಕೊಹ್ಲಿಯ 4 ದಾಖಲೆಗಳನ್ನು ಮುರಿದರು.

ಮೊದಲನೆಯದಾಗಿ ಗಿಲ್, 150 ರನ್‌ಗಳ ಗಡಿ ತಲುಪಿದ ತಕ್ಷಣ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಅತಿ ಹೆಚ್ಚು ಸ್ಕೋರ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ 2018 ರಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ 149 ರನ್‌ಗಳ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ಹೆಸರಿನಲ್ಲಿತ್ತು.

ಹಾಗೆಯೇ ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನಾಗಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ಗಿಲ್ ನಿರ್ಮಿಸಿದರು. ಇದರ ಜೊತೆಗೆ ನಾಯಕನಾಗಿ ಕೊಹ್ಲಿ ಆಡಿದ 149 ರನ್‌ಗಳ ಇನ್ನಿಂಗ್ಸ್ ದಾಖಲೆಯನ್ನೂ ಗಿಲ್ ಮುರಿದರು.

ಆ ನಂತರ ತಮ್ಮ ದ್ವಿಶತಕ ಪೂರೈಸಿದ ಗಿಲ್, 235 ರನ್‌ಗಳನ್ನು ದಾಟಿದ ತಕ್ಷಣ, ಕೊಹ್ಲಿಯ ಮೂರನೇ ದಾಖಲೆಯನ್ನು ಸಹ ಮುರಿದರು. ಈಗ ಇಂಗ್ಲೆಂಡ್ ವಿರುದ್ಧ ನಾಯಕನಾಗಿ ಭಾರತದ ಪರ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಗಿಲ್ ಹೆಸರಿನಲ್ಲಿ ದಾಖಲಾಗಿದೆ. ಇದಕ್ಕೂ ಮೊದಲು, ಕೊಹ್ಲಿ 2016 ರಲ್ಲಿ ಮುಂಬೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 235 ರನ್ ಗಳಿಸಿದ್ದರು.

ಇಲ್ಲಿಗೆ ನಿಲ್ಲದ ಗಿಲ್, ನಾಯಕನಾಗಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಸಹ ಮುರಿದರು. ವಾಸ್ತವವಾಗಿ ಕೊಹ್ಲಿ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 254 (ಅಜೇಯ) ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಗಿಲ್ ಇದನ್ನೂ ಸಹ ಮುರಿಯುವಲ್ಲಿ ಯಶಸ್ವಿಯಾದರು.
