AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬೌಲಿಂಗ್; ಬೇಡದ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ

Prasidh Krishna's Edgbaston Nightmare: ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಕಾನಮಿ ದರ ಹೊಂದಿರುವ ಬೌಲರ್ ಎಂಬ ಬೇಡದ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೃಷ್ಣ ಇಂಗ್ಲೆಂಡ್ ಪ್ರವಾಸದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಅವರ ದುಬಾರಿ ಬೌಲಿಂಗ್ ಭಾರತ ತಂಡದ ಸೋಲಿಗೆ ಕಾರಣವಾಗಿದೆ. ಇದರಿಂದಾಗಿ ಭಾರತ ತಂಡ ಸತತ ಎರಡನೇ ಟೆಸ್ಟ್ ಪಂದ್ಯವನ್ನು ಸೋಲುವ ಅಪಾಯದಲ್ಲಿದೆ.

ಪೃಥ್ವಿಶಂಕರ
|

Updated on: Jul 04, 2025 | 8:44 PM

Share
ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಸತತ ಎರಡನೇ ಪಂದ್ಯವನ್ನು ಸೋಲುವ ಸುಳಿವು ನೀಡುತ್ತಿದೆ. 84 ವಿಕೆಟ್​ಗಳಿಗೆ ಇಂಗ್ಲೆಂಡ್​ನ ಪ್ರಮುಖ 5 ವಿಕೆಟ್​ಗಳನ್ನು ಉರುಳಿಸಿದ್ದ ಟೀಂ ಇಂಡಿಯಾ ವೇಗಿಗಳು ಆ ಬಳಿಕ ವಿಕೆಟ್​ಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

1 / 7
ಅದರಲ್ಲೂ 2025 ರ ಐಪಿಎಲ್​ನಲ್ಲಿ ತಮ್ಮ ಮಾರಕ ದಾಳಿಯ ಮೂಲಕ ಅತ್ಯಧಿಕ ವಿಕೆಟ್ ಪಡೆದು ಪರ್ಪಲ್ ಗೆದ್ದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಇಂಗ್ಲೆಂಡ್‌ ಪ್ರವಾಸ ದುಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್​ನಲ್ಲಿ ಹೆಚ್ಚಿಗೆ ರನ್ ನೀಡದೆ ಸಖತ್ ಹೆಸರು ಮಾಡಿದ್ದ ಕೃಷ್ಣ, ಇಂಗ್ಲೆಂಡ್‌ ಪ್ರವಾಸದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

2 / 7
ಇಂಗ್ಲೆಂಡ್‌ ಪ್ರವಾಸದಲ್ಲಿ ಇದುವರೆಗೆ ಯಾವುದೇ ರೀತಿಯಾಗಿ ಪರಿಣಾಮ ಬೀರುವಲ್ಲಿ ವಿಫಲರಾಗಿರುವ ಪ್ರಸಿದ್ಧ್ ಕೃಷ್ಣ, ಇದೀಗ 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವ ವೇಗಿಯೂ ಬಯಸದ ಅತ್ಯಂತ ಕೆಟ್ಟ ದಾಖಲೆಯೊಂದಕ್ಕೆ ಕೊರಳೊಡ್ಡಿದ್ದಾರೆ.

3 / 7
ಇಂಗ್ಲೆಂಡ್‌ ವಿರುದ್ಧದ ಎಡ್ಜ್‌ಬಾಸ್ಟನ್​ ಟೆಸ್ಟ್‌ನಲ್ಲಿ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಎಕಾನಮಿ ರೇಟ್ ಹೊಂದಿರುವ ಬೌಲರ್ ಎಂಬ ಬೇಡದ ದಾಖಲೆ ನಿರ್ಮಿದ್ದಾರೆ. ಟೆಸ್ಟ್‌ನಲ್ಲಿ ಕನಿಷ್ಠ 500 ಎಸೆತಗಳನ್ನು ಬೌಲ್ ಮಾಡಿದ ಬೌಲರ್‌ಗಳ ಬಗ್ಗೆ ಮಾತನಾಡಿದರೆ, ಪ್ರಸಿದ್ಧ್ ಕೃಷ್ಣ ಅವರಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ.

4 / 7
ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಕೃಷ್ಣ ಅವರ ಎಕಾನಮಿ ದರ ಪ್ರತಿ ಓವರ್‌ಗೆ 5 ರನ್‌ಗಳಿಗಿಂತ ಹೆಚ್ಚಿದ್ದು, ಇದು ಇತರ ಬೌಲರ್​ಗಳಿಗೆ ಹೊಲಿಸಿದರೆ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೃಷ್ಣ ಒಂದೇ ಓವರ್‌ನಲ್ಲಿ 23 ರನ್‌ಗಳನ್ನು ಬಿಟ್ಟುಕೊಟ್ಟು ಸಾಕಷ್ಟು ದುಬಾರಿಯಾದರು.

5 / 7
ಒಟ್ಟಾರೆ ಟೆಸ್ಟ್ ದಾಖಲೆಯ ಬಗ್ಗೆ ಹೇಳುವುದಾದರೆ, ಬಾಂಗ್ಲಾದೇಶದ ವೇಗದ ಬೌಲರ್ ಶಹಾದತ್ ಹುಸೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ಎಕಾನಮಿ ರೇಟ್ ಹೊಂದಿದ್ದು, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5380 ಎಸೆತಗಳಲ್ಲಿ 4.16 ಎಕಾನಮಿ ರೇಟ್‌ನಲ್ಲಿ 3731 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

6 / 7
ಇನ್ನು ಟೀಂ ಇಂಡಿಯಾ ಬಗ್ಗೆ ಹೇಳುವುದಾದರೆ.. ಎಡಗೈ ವೇಗಿ ಆರ್​ಪಿ ಸಿಂಗ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಎಕಾನಮಿ ರೇಟ್ ಹೊಂದಿರುವ ಬೇಡದ ದಾಖಲೆ ನಿರ್ಮಿಸಿದ್ದಾರೆ. ಅವರು 2534 ಎಸೆತಗಳಲ್ಲಿ 3.98 ಎಕಾನಮಿ ರೇಟ್‌ನಲ್ಲಿ ರನ್ ನೀಡಿದ್ದಾರೆ.

7 / 7
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್

ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್

ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ

ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ

ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು

ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್

ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು

Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ