ಸೆಪ್ಟೆಂಬರ್ 27ಕ್ಕೆ ದೆಹಲಿ ಶಾಲೆಗಳಲ್ಲಿ ಆರಂಭವಾಗಲಿದೆ ದೇಶಭಕ್ತಿ ಪಠ್ಯಕ್ರಮ: ಅರವಿಂದ ಕೇಜ್ರಿವಾಲ್
Arvind Kejriwal: ಇದು ವಾಡಿಕೆ ಕಲಿಕೆಯ ಅಗತ್ಯವಿರುವ ವಿಷಯವಲ್ಲ. ಮಕ್ಕಳಿಗೆ ರಾಷ್ಟ್ರದ ಕಥೆಗಳ ಬಗ್ಗೆ ಹೇಳಲಾಗುತ್ತದೆ. ರಾಷ್ಟ್ರದ ಮೇಲೆ ಅವರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಮತ್ತು ಅವರು ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತವೆ ಎಂದು ಕೇಜ್ರಿವಾಲ್ ಹೇಳಿದರು
ದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನಾಚರಣೆಯ ನಿಮಿತ್ತ ಸೆಪ್ಟೆಂಬರ್ 27 ರಿಂದ ದೆಹಲಿಯಾದ್ಯಂತ ಶಾಲೆಗಳಲ್ಲಿ ದೇಶಭಕ್ತಿ ಪಠ್ಯಕ್ರಮವು ಜಾರಿಗೆ ಬರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಇದು ಚಟುವಟಿಕೆ ಆಧಾರಿತವಾಗಿದ್ದು ಮಕ್ಕಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಇದು ವಾಡಿಕೆ ಕಲಿಕೆಯ ಅಗತ್ಯವಿರುವ ವಿಷಯವಲ್ಲ. ಮಕ್ಕಳಿಗೆ ರಾಷ್ಟ್ರದ ಕಥೆಗಳ ಬಗ್ಗೆ ಹೇಳಲಾಗುತ್ತದೆ. ರಾಷ್ಟ್ರದ ಮೇಲೆ ಅವರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಮತ್ತು ಅವರು ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತವೆ ಎಂದು ಕೇಜ್ರಿವಾಲ್ ಹೇಳಿದರು. ಕಳೆದ ವಾರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ.
ಭಾನುವಾರ ಸ್ವಾತಂತ್ರ್ಯ ದಿನದಂದು ದೆಹಲಿ ಸೆಕ್ರೆಟರಿಯೇಟ್ ನಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಕೇಜ್ರಿವಾಲ್ ಮಾತನಾಡಿದ ಕೇಜ್ರಿವಾಲ್ ಸಾಂಕ್ರಾಮಿಕ ಸಮಯದಲ್ಲಿ ಜೀವ ಕಳೆದುಕೊಂಡ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದ್ದಾರೆ.
बच्चे देश का भविष्य हैं, अगर आज हमने बच्चों को देश की बागडोर संभालने के लिए तैयार कर दिया तो देश का भविष्य सुनहरा होगा। इसलिए अब दिल्ली के स्कूलों में हम बच्चों को देशभक्ति पाठ्यक्रम द्वारा देश से प्यार करना सिखाएंगे। pic.twitter.com/jh0OwibcBc
— Arvind Kejriwal (@ArvindKejriwal) August 15, 2021
ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಸಿಎಂ ಕಳೆದ ವರ್ಷ ಶಾಲಾ ಶಿಕ್ಷಣದಲ್ಲಿ ವಿವಿಧ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಅಕ್ಟೋಬರ್ 2 ರಂದು ನಗರದ ಹಲವು ಭಾಗಗಳಲ್ಲಿ ಉದ್ಯಾನವನಗಳು ಮತ್ತು ಸಮುದಾಯ ಭವನಗಳಲ್ಲಿ ದೆಹಲಿಯಲ್ಲಿ ಉಚಿತ ಯೋಗ ತರಗತಿಗಳು ಆರಂಭವಾಗಲಿವೆ ಎಂದು ಕೇಜ್ರಿವಾಲ್ ಹೇಳಿದರು. ಪ್ರಾದೇಶಿಕ ಸಂಚಾರ ಕಚೇರಿಗಳಲ್ಲಿ ಮತ್ತು ಮನೆಬಾಗಿಲು ವಿತರಣಾ ಸೇವೆಗಳ ಮೂಲಕ ಫೇಸ್ ಲೆಸ್ ಸೇವೆಗಳ ರೂಪದಲ್ಲಿ ಆಡಳಿತದಲ್ಲಿನ ಬದಲಾವಣೆಗಳನ್ನು ಅವರು ಎತ್ತಿ ತೋರಿಸಿದರು. ದೇಶಭಕ್ತಿ ಪಠ್ಯಕ್ರಮದ ಕುರಿತು ಮಾತನಾಡಿದ ಅವರು ತಮ್ಮ ಮಕ್ಕಳಿಗೆ ಸಹಾಯ ಮಾಡುವಲ್ಲಿ ಪೋಷಕರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
“ನಿಮ್ಮ ಮಗು ಶಾಲೆ ಮುಗಿಸಿ ಬಂದಾಗ, ಅವರೊಂದಿಗೆ ಕುಳಿತು ರಾಷ್ಟ್ರದ ಬಗ್ಗೆ ಮಾತನಾಡಿ, ಅವರಿಗೆ ಏನು ಕಲಿಸಲಾಗಿದೆ ಎಂದು ಕೇಳಿ. ಮಕ್ಕಳು ಮತ್ತು ಪೋಷಕರು ಇಬ್ಬರೂ ಕಲಿಯುತ್ತಾರೆ, ”ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್ ಮಂಡಳಿಯೊಂದಿಗೆ ಸರ್ಕಾರವು ಹೊಂದಿಕೊಂಡಿರುವ ಒಪ್ಪಂದದ ಬಗ್ಗೆ ಮಾತನಾಡಿದ ಕೇಜ್ರಿವಾಲ್ ಈ ವರ್ಷ 30 ಶಾಲೆಗಳು ಹೊಸ ಪಠ್ಯಕ್ರಮವನ್ನು ಹೊಂದಿವೆ. ಹೊಸ ದೆಹಲಿ ಶಾಲಾ ಶಿಕ್ಷಣ ಮಂಡಳಿಯ ಅಡಿಯಲ್ಲಿ ಎಲ್ಲಾ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಇದನ್ನೂ ಓದಿ: Independence Day: ಭಾರತದ ಜೊತೆ ಈ ದೇಶಗಳಿಗೂ ಇಂದು ರಾಷ್ಟೀಯ ದಿನದ ಸಂಭ್ರಮ
ಇದನ್ನೂ ಓದಿ: ದೇಶ ವಿಭಜನೆ ವೇಳೆ ಪಾಕ್ ಪಾಲಾದ ಕುಟುಂಬದ ಮೂಲ ಅರಸಿ ಹೋದ ಭಾರತೀಯ; ಕಪ್ಪು ನವಿಲಿನ ಜಾಡು ಹಿಡಿದು ಹೊರಟ ರೋಚಕ ಕತೆ
(Deshbhakti curriculum Delhi from Arvind Kejriwal Bhagat Singh State Council of Educational Research)