Updated on:Aug 15, 2021 | 2:21 PM
This four countries share their independence day with india
ಲಿಚ್ಟೆನ್‌ಸ್ಟೈನ್(Liechtenstein): ಆಸ್ಟ್ರಿಯಾ ಮತ್ತು ಸ್ವಿಜರ್ಲೆಂಡ್ ದೇಶದ ನಡುವೆ ಇರುವ ಲೀಚ್ಟೆನ್‌ಸ್ಟೈನ್ ತನ್ನ ರಾಷ್ಟ್ರೀಯ ದಿನವನ್ನು ಆಗಸ್ಟ್ 15 ರಂದು ಆಚರಿಸುತ್ತದೆ. ಇದನ್ನು 1940 ರಿಂದ ಆಚರಿಸಲಾಗುತ್ತಿದೆ. ಇಲ್ಲಿ ಆಡಳಿತ ನಡೆಸುತ್ತಿದ್ದ ರಾಜಕುಮಾರ 2ನೇ ಫ್ರಾಂಜ್-ಜೋಸೆಫ್ ಆಗಸ್ಟ್ 15 ರಂದು ಜನಿಸಿದ ಎನ್ನಲಾಗಿದೆ.
ಉತ್ತರ ಮತ್ತು ದಕ್ಷಿಣ ಕೊರಿಯಾ(North and South Korea): ಆಗಸ್ಟ್ 15 ಕೊರಿಯಾದ ರಾಷ್ಟ್ರೀಯ ವಿಮೋಚನಾ ದಿನವಾಗಿದೆ. ಇದು ಉತ್ತರ ಮತ್ತು ದಕ್ಷಿಣ ಕೊರಿಯಾದಲ್ಲಿ ಪ್ರತಿ ವರ್ಷ ಆಚರಿಸುವ ರಜಾದಿನವಾಗಿದೆ. ಇದು 2ನೇ ಮಹಾಯುದ್ಧದ ಕೊನೆಯಲ್ಲಿ ಆಗಸ್ಟ್ 15ರಂದು ಜಪಾನಿಯರಿಂದ ಸ್ವಾತಂತ್ರ್ಯಗೊಂಡ ಉತ್ತರ ಮತ್ತು ದಕ್ಷಿಣ ಕೊರಿಯಾ ಈ ದಿನವನ್ನು ಕೊರಿಯಾದ ರಾಷ್ಟ್ರೀಯ ವಿಮೋಚನಾ ದಿನವಾಗಿ ಘೋಷಿಸಿದೆ.
ರಿಪಬ್ಲಿಕ್ ಆಫ್ ಕಾಂಗೋ(Republic of Congo): ರಿಪಬ್ಲಿಕ್ ಆಫ್ ಕಾಂಗೋ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಪಡೆಯಿತು. 1960ರ ಆಗಸ್ಟ್ 15ರಂದು ಫ್ರೆಂಚ್ರಿಂದ ಸ್ವಾತಂತ್ರ್ಯ ಪಡೆದ ಕಾಂಗೋ ದೇಶ ಬಳಿಕ ರಿಪಬ್ಲಿಕ್ ಆಫ್ ಕಾಂಗೋವಾಗಿ ಉಗಮಗೊಂಡಿತು. ಈ ದೇಶ 1880ರಲ್ಲಿ ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತ್ತು. ಫ್ರೆಂಚರು ಸುಮಾರು 80 ವರ್ಷ ಆಳ್ವಿಕೆ ಮಾಡಿದ್ದಾರೆ.
Published On - 2:17 pm, Sun, 15 August 21