ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಸುಷ್ಮಿತಾ ದೇವ್
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರೆ ಬರೆದು ಪಕ್ಷಕ್ಕೆ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅಸ್ಸಾಂನ ಕಾಂಗ್ರೆಸ್ ನಾಯಕಿಯಾಗಿರುವ ಸುಷ್ಮಿತಾ ದೇವ್ ಪ್ರಕಟಿಸಿದ್ದಾರೆ. 48 ವರ್ಷದ ಸುಷ್ಮಿತಾ ದೇವ್ ಈ ಹಿಂದೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ (All India Mahila Congress) ಅಧ್ಯಕ್ಷೆಯಾಗಿದ್ದರು. ಸುಷ್ಮಿತಾ ದೇವ್ ಅವರ ತಂದೆ ಸಂತೋಷ್ ಮೋಹನ್ ದೇವ್ ಈ ಹಿಂದೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮತ್ತು ತಾಯಿ ಬಿತಿಕಾ ದೇವ್ ಅವರು ಅಸ್ಸಾಂನಲ್ಲಿ ಶಾಸಕಿಯಾಗಿದ್ದರು. ಈ ಬೆಳವಣಿಗೆಯ ಮಧ್ಯೆ, ಕಾಂಗ್ರೆಸ್ […]
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರೆ ಬರೆದು ಪಕ್ಷಕ್ಕೆ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅಸ್ಸಾಂನ ಕಾಂಗ್ರೆಸ್ ನಾಯಕಿಯಾಗಿರುವ ಸುಷ್ಮಿತಾ ದೇವ್ ಪ್ರಕಟಿಸಿದ್ದಾರೆ. 48 ವರ್ಷದ ಸುಷ್ಮಿತಾ ದೇವ್ ಈ ಹಿಂದೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ (All India Mahila Congress) ಅಧ್ಯಕ್ಷೆಯಾಗಿದ್ದರು. ಸುಷ್ಮಿತಾ ದೇವ್ ಅವರ ತಂದೆ ಸಂತೋಷ್ ಮೋಹನ್ ದೇವ್ ಈ ಹಿಂದೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮತ್ತು ತಾಯಿ ಬಿತಿಕಾ ದೇವ್ ಅವರು ಅಸ್ಸಾಂನಲ್ಲಿ ಶಾಸಕಿಯಾಗಿದ್ದರು.
ಈ ಬೆಳವಣಿಗೆಯ ಮಧ್ಯೆ, ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ಸುಷ್ಮಿತಾ ದೇವ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರೊಫೈಲ್ ಬದಲಿಸಿದ್ದು, ಕಾಂಗ್ರೆಸ್‌ನ ಮಾಜಿ ಸದಸ್ಯೆ ಎಂದಿದ್ದಾರೆ. ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದ ಸುಷ್ಮಿತಾ ದೇವ್ ತಾವು ಕಾಂಗ್ರೆಸ್ ತೊರೆಯುತ್ತಿರುವುದಕ್ಕೆ ಕಾರಣವನ್ನೇನೂ ನೀಡಿಲ್ಲ. ಕೇವಲ ತಮ್ಮ ಸಾರ್ವಜನಿಕ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
(Assam ex Congress MP Sushmita Dev Quits Party Sends Letter To Sonia Gandhi)
Published On - 9:53 am, Mon, 16 August 21