ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್​; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ

2002 ರಿಂದ 5.3 ಬಿಲಿಯನ್ ಡಾಲರ್ ಹಣವನ್ನು ಅಫ್ಘಾನಿಸ್ತಾನಕ್ಕೆ ನೀಡಿದ್ದ ವಿಶ್ವಬ್ಯಾಂಕ್ ಇದೀಗ ದೇಶ ತಾಲಿಬಾನಿಗಳ ಹಿಡಿತಕ್ಕೆ ಸಿಲುಕುತ್ತಿದ್ದಂತೆಯೇ ಎಲ್ಲಾ ಬಗೆಯ ಹಣಕಾಸು ನೆರವು ಸ್ಥಗಿತಗೊಳಿಸಿದೆ. ಕಳೆದ ವಾರವಷ್ಟೇ ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ ನಿರ್ಧಾರ ಮಾಡಿತ್ತು.

ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್​; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ
ಸಾಂದರ್ಭಿಕ ಚಿತ್ರ
TV9kannada Web Team

| Edited By: Skanda

Aug 25, 2021 | 9:59 AM

ತಾಲಿಬಾನ್​ ಕೈವಶವಾಗಿರುವ ಅಫ್ಘಾನಿಸ್ತಾನ ಎಲ್ಲಾ ರೀತಿಯಲ್ಲೂ ಸಂಕಷ್ಟ ಅನುಭವಿಸುತ್ತಿದ್ದು ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಇದೀಗ ಅಫ್ಘಾನಿಸ್ತಾನಕ್ಕೆ ಅಷ್ಟೂ ಬಗೆಯ ಹಣಕಾಸು ನೆರವು ಸ್ಥಗಿತವಾಗಿದ್ದು, ಅಂತಿಮವಾಗಿ ವಿಶ್ವಬ್ಯಾಂಕ್ (World Bank) ಕೂಡಾ ಹಣ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಐಎಂಎಫ್​ ಹಣಕಾಸು ನೆರವು ನಿಲ್ಲಿಸಿತ್ತು, ಇನ್ನೊಂದೆಡೆ ಅಮೆರಿಕಾದ ಬ್ಯಾಂಕ್​ಗಳಲ್ಲಿರುವ ಅಫ್ಘಾನಿಸ್ತಾನದ (Afghanistan) ಹಣವೂ ಜಪ್ತಿಯಾಗಿದೆ. ಹೀಗಾಗಿ ಸದ್ಯ ಅಫ್ಘಾನಿಸ್ತಾನದಲ್ಲಿ ಹಣಕ್ಕೆ ಹಾಹಾಕಾರ ಆರಂಭವಾಗುವ ಸಂದರ್ಭ ಸನ್ನಿಹಿತವಾಗಿದೆ.

2002 ರಿಂದ 5.3 ಬಿಲಿಯನ್ ಡಾಲರ್ ಹಣವನ್ನು ಅಫ್ಘಾನಿಸ್ತಾನಕ್ಕೆ ನೀಡಿದ್ದ ವಿಶ್ವಬ್ಯಾಂಕ್ ಇದೀಗ ದೇಶ ತಾಲಿಬಾನಿಗಳ ಹಿಡಿತಕ್ಕೆ ಸಿಲುಕುತ್ತಿದ್ದಂತೆಯೇ ಎಲ್ಲಾ ಬಗೆಯ ಹಣಕಾಸು ನೆರವು ಸ್ಥಗಿತಗೊಳಿಸಿದೆ. ಕಳೆದ ವಾರವಷ್ಟೇ ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (International Monetary Fund- IMF) ನಿರ್ಧಾರ ಮಾಡಿತ್ತು. ಆಫ್ಘನ್‌ಗೆ 650 ಮಿಲಿಯನ್ ಡಾಲರ್ ಹಣ ನೀಡಲು ಈ ಹಿಂದೆ ಅನುಮೋದನೆ ಕೊಟ್ಟಿದ್ದ ಐಎಂಎಫ್ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ಹಾಗಾಗಿ ಆಗಸ್ಟ್ 23ರಂದು ಅಫ್ಘಾನಿಸ್ತಾನಕ್ಕೆ ಬರಬೇಕಿದ್ದ 340 ಮಿಲಿಯನ್ ಡಾಲರ್ ಕೈ ತಪ್ಪಿ ಹೋಗಿತ್ತು. ಇದೀಗ ವಿಶ್ವ ಬ್ಯಾಂಕ್​ ಕೂಡಾ ಹಣ ನೀಡದಿರಲು ನಿರ್ಧರಿಸಿರುವುದರಿಂದ ಸಂಕಷ್ಟ ಹೆಚ್ಚಲಿದೆ.

ಈ ಮಧ್ಯೆ, ಆಫ್ಘನ್‌ನಲ್ಲಿರುವ ತಾಲಿಬಾನಿಗಳಿಗೆ (Taliban) ಹಣ ಸಿಗದೆ ಕಂಗಾಲಾಗಿದ್ದಾರೆ. ದಿ ಅಪ್ಘಾನಿಸ್ತಾನ ಬ್ಯಾಂಕ್‌ನ ಹಣವನ್ನು ಅಮೆರಿಕ ಜಪ್ತಿ ಮಾಡಿದೆ. ಹೀಗಾಗಿ ಹಣ ಸಿಗದೆ ತಾಲಿಬಾನ್ ಉಗ್ರರು ಕಂಗಾಲಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಭಾರತ ಸೇರಿದಂತೆ ಪ್ರಮುಖ ದೇಶಗಳಿಂದ ತಾಲಿಬಾನಿಗಳಿಗೆ ಹಣ ಸಿಗುತ್ತಿಲ್ಲ. ಪಾಕ್ ಈಗಾಗಲೇ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಹೀಗಾಗಿ ಸದ್ಯ ಹಣ ಸಿಗದೆ ತಾಲಿಬಾನಿಗಳು ಕಂಗಾಲಾಗಿದ್ದಾರೆ. ಚೀನಾದಿಂದ ಹಣ ಬರುವ ನಿರೀಕ್ಷೆಯಲ್ಲಿ ತಾಲಿಬಾನ್ ಉಗ್ರರು ಇದ್ದಾರೆ. ಅಪ್ಘಾನಿಸ್ತಾನ ಅಭಿವೃದ್ಧಿಗೆ ಚೀನಾ ಕೊಡುಗೆ ನೀಡಬಹುದು ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ಹೇಳಿಕೆ ನೀಡಿದ್ದಾರೆ.

ಇತ್ತ ಪಾಕಿಸ್ತಾನದ ಬಗ್ಗೆ ಕಿಡಿಕಾರಿರುವ ಆಫ್ಘನ್ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹಾ ತಾಲಿಬಾನ್ ಪಾಕಿಸ್ತಾನವನ್ನ ತನ್ನ ಬೆಂಬಲಕ್ಕೆ ಬಳಸಿಕೊಳ್ಳುತ್ತಿದೆ. ಸಂಪೂರ್ಣ ಪಾಕಿಸ್ತಾನ ತಾಲಿಬಾನ್ ಸೇವೆಯಲ್ಲಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪಂಜ್‌ಶೀರ್ ಪ್ರಾಂತ್ಯಕ್ಕೆ 40 ಜನರ ತಾಲಿಬಾನ್ ನಿಯೋಗ ಆಗಮಿಸಿದ್ದು, ಸಂಧಾನಕ್ಕೆ ಮುಂದಾಗಿದೆ. ತಾಲಿಬಾನ್ ಪಂಜ್‌ಶೀರ್ ಪ್ರಾಂತ್ಯದ ಬೇಡಿಕೆ ಒಪ್ಪಿಕೊಳ್ಳಬೇಕು. ಇಲ್ಲದೇ ಇದ್ದರೆ ಪಂಜ್‌ಶೀರ್ ಪ್ರಾಂತ್ಯವು ತಾಲಿಬಾನ್ ವಿರುದ್ಧ ಯುದ್ಧ ಘೋಷಿಸಲಿದೆ ಎಂದು ಅಲ್ಲಿನ ನಾಯಕರು ತಿಳಿಸಿದ್ದಾರೆ. ಸಂಧಾನ ಮಾತುಕತೆಯ ವಿವರ ನಾಳೆ ಲಭ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಯಾರೂ ಹೊರಹೋಗುವಂತಿಲ್ಲ; ವಿದೇಶಿ ಸೇನೆ ಬೇಗ ಜಾಗ ಖಾಲಿ ಮಾಡಿದರೆ ಒಳ್ಳೆಯದು: ತಾಲಿಬಾನ್ ಎಚ್ಚರಿಕೆ 

Taliban: ಅಫ್ಘಾನಿಸ್ತಾನದಲ್ಲಿ ಬುರ್ಕಾ ಬೆಲೆ ಏರಿಕೆ; 500 ರಿಂದ 2,500 ಅಫ್ಘನೀಸ್​ಗೆ ಹೆಚ್ಚಳ

(World Bank decided to stop funding Afghanistan because of Taliban)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada