AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಿಂದ ಯಾರೂ ಹೊರಹೋಗುವಂತಿಲ್ಲ; ವಿದೇಶಿ ಸೇನೆ ಬೇಗ ಜಾಗ ಖಾಲಿ ಮಾಡಿದರೆ ಒಳ್ಳೆಯದು: ತಾಲಿಬಾನ್ ಎಚ್ಚರಿಕೆ

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ. ಇಲ್ಲಿನ ಜನರು ಇಲ್ಲೇ ಇರಬೇಕು. ಅವರಿಗೆ ದೇಶ ಬಿಟ್ಟು ಹೋಗಲು ಅನುಮತಿ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ಧಾನೆ.

ಅಫ್ಘಾನಿಸ್ತಾನದಿಂದ ಯಾರೂ ಹೊರಹೋಗುವಂತಿಲ್ಲ; ವಿದೇಶಿ ಸೇನೆ ಬೇಗ ಜಾಗ ಖಾಲಿ ಮಾಡಿದರೆ ಒಳ್ಳೆಯದು: ತಾಲಿಬಾನ್ ಎಚ್ಚರಿಕೆ
ಕಾಬೂಲ್​ ಏರ್​ಪೋರ್ಟ್ (ಪ್ರಾತಿನಿಧಿಕ ಚಿತ್ರ)​
TV9 Web
| Edited By: |

Updated on: Aug 25, 2021 | 8:17 AM

Share

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರದ್ದೇ ಪಾರುಪತ್ಯವಾಗಿದ್ದು ಅವರು ಹೇಳಿದ್ದೇ ಅಂತಿಮ ಎಂಬಂತಾಗಿದೆ. ಅವರ ಅಟ್ಟಹಾಸಕ್ಕೆ ಹೆದರಿ ಜನ ಗುಂಪುಗುಂಪಾಗಿ ದೇಶ ತೊರೆಯುತ್ತಿದ್ದು ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಹಿಡಿ ಜಾಗ ಸಿಕ್ಕರೂ ಜೀವ ಉಳಿಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದಾರೆ. ಆದರೆ, ಇದೀಗ ದೇಶ ಬಿಟ್ಟು ಹೋಗುವವರಿಗೆ ತಾಲಿಬಾನ್​ ತಡೆಯೊಡ್ಡಿದ್ದು, ಇನ್ನು ಮುಂದೆ ಅಫ್ಘಾನಿಸ್ತಾನದ ನಾಗರೀಕರು ಯಾರೂ ದೇಶದಿಂದ ಹೊರ ಹೋಗುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ. ಇಲ್ಲಿನ ಜನರು ಇಲ್ಲೇ ಇರಬೇಕು. ಅವರಿಗೆ ದೇಶ ಬಿಟ್ಟು ಹೋಗಲು ಅನುಮತಿ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ಧಾನೆ. ಆಗಸ್ಟ್​​ 31ರ ಬಳಿಕ ವಿದೇಶಿಯರ ಸ್ಥಳಾಂತರ ಮುಂದುವರೆದರೆ ಅದು ಕೂಡಾ ಒಪ್ಪಂದದ ಉಲ್ಲಂಘನೆ ಆಗುತ್ತದೆ. ನೆರೆಹೊರೆ ದೇಶಗಳ ವಿರುದ್ಧ ಆಫ್ಘನ್ ನೆಲ ಬಳಕೆಗೆ ಅವಕಾಶವಿಲ್ಲ. ವಿದೇಶಿ ಪಡೆಗಳು ದೀರ್ಘಕಾಲ ಆಫ್ಘನ್‌ನಲ್ಲಿರಲು ಅವಕಾಶವಿಲ್ಲ.  ವಿದೇಶಿ ರಾಯಭಾರ ಕಚೇರಿಗಳಿಗೆ ಭದ್ರತೆ ನೀಡುತ್ತೇವೆ. ಅವರು ಕೆಲಸ ಮುಂದುವರಿಸಬೇಕು. ರಾಯಭಾರಿಗಳಿಗೆ ಸಂಪೂರ್ಣ ಭದ್ರತೆ ನೀಡುವ ಹೊಣೆ ನಮ್ಮದು ಎಂದು ತಾಲಿಬಾನ್​ ಹೇಳಿಕೊಂಡಿದೆ.

ಅಫ್ಘಾನಿಸ್ತಾನದ ಜನರಿಗೆ ಕ್ಷಮಾದಾನ ಘೋಷಣೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು‌ ಪ್ರಯತ್ನ ಸಾಗಿದೆ ಎಂದು ಜಬೀವುಲ್ಲಾ ಹೇಳಿಕೆ ನೀಡಿದ್ದು, ತಾಲಿಬಾನ್‌ಗೆ ದ್ರೋಹ ಬಗೆದವರ ಬಗ್ಗೆ ಈಗ ಮಾತನಾಡಲ್ಲ. ಸಮಯ ಬಂದಾಗ ತಾಲಿಬಾನ್ ಈ ಬಗ್ಗೆ ಮಾತನಾಡುತ್ತೆ ಎಂದು ಹೇಳಿದ್ದಾನೆ. ಅಂತೆಯೇ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಸಾವಿನ ಬಗ್ಗೆಯೂ ಮಾತನಾಡಿದ್ದು, ಯುದ್ಧದ ಸಮಯದಲ್ಲಿ ಡ್ಯಾನಿಶ್ ಸಿದ್ದಿಕಿ ಸಾವು ಸಂಭವಿಸಿದೆ. ಯಾರ ಬುಲೆಟ್‌ನಿಂದ ಸಾವು ಸಂಭವಿಸಿದೆ ಎಂದು ಗೊತ್ತಿಲ್ಲ. ಡ್ಯಾನಿಶ್ ಸಿದ್ದಿಕಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾನೆ.

ಒಂದು ವೇಳೆ ಆಮೆರಿಕಾ ಪಡೆ ಆಗಸ್ಟ್ 31 ರ ಬಳಿಕವೂ ಅಫ್ಘನ್​ನಲ್ಲಿದ್ದರೆ ತಾಲಿಬಾನ್ ನಾಯಕತ್ವ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ. ಪಂಜಶಿರ್ ಪ್ರಾಂತ್ಯದ ನಮ್ಮ ಸಹೋದರರು ಕಾಬೂಲ್​ಗೆ ಬರಬೇಕು. ನಮ್ಮ ಇಬ್ಬರ ಗುರಿ ಒಂದೇ ಹೆದರಬೇಡಿ. ಹೋರಾಟ ಬೇಡ. ವಾಪಸ್ ಬನ್ನಿ ಎಂದು ಪಂಜಶಿರ್ ಪ್ರಾಂತ್ಯದ ನಾಯಕರಿಗೆ ತಾಲಿಬಾನ್ ಕರೆ ನೀಡಿದೆ.

ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಚೀನಾ ದೇಶವನ್ನು ಹಾಡಿ ಹೊಗಳಿದ್ದು, ಚೀನಾ ನಮ್ಮ ಒಳ್ಳೆಯ ನೆರೆಹೊರೆಯ ದೇಶ. ಚೀನಾದೊಂದಿಗೆ ಅಫ್ಘಾನಿಸ್ತಾನದ ಹೊಸ ಸರ್ಕಾರ ಒಳ್ಳೆಯ ಸಂಬಂಧ ಹೊಂದುತ್ತದೆ ಎಂದಿದ್ದಾನೆ. ಇನ್ನು ಮಹಿಳೆಯರ ಬಗ್ಗೆ ಮಾತನಾಡಿ, ಉದ್ಯೋಗಸ್ಥ ಮಹಿಳೆಯರು ಮನೆಯಲ್ಲಿ ಇರುವುದು ತಾತ್ಕಾಲಿಕ ಎಲ್ಲವೂ ಶೀಘ್ರದಲ್ಲೇ ಸರಿಹೋಗಲಿದೆ ಎಂಬ ಭರವಸೆ ನೀಡಿದ್ದಾನೆ.

ಇದನ್ನೂ ಓದಿ: ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದ ತಾಲಿಬಾನ್; ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ 

Taliban: ಅಫ್ಘಾನಿಸ್ತಾನದಲ್ಲಿ ಬುರ್ಕಾ ಬೆಲೆ ಏರಿಕೆ; 500 ರಿಂದ 2,500 ಅಫ್ಘನೀಸ್​ಗೆ ಹೆಚ್ಚಳ

(Afghanistan citizens are not allowed to leave country Foreign military forces should vacate soon Taliban warns)