ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯಕ್ಕೆ ತಾಲಿಬಾನ್ ಮುತ್ತಿಗೆ: ಆಹಾರ, ಇಂಧನ ಸ್ಥಗಿತ

ತಾಲಿಬಾನಿಗಳು ದೊಡ್ಡ ಸಂಖ್ಯೆಯನ್ನು ಹೋರಾಟಗಾರರನ್ನು ಪಂಜ್​ಶಿರ್​ ಕಣಿವೆಗೆ ನಿಯೋಜಿಸಿದ್ದು, ಇಡೀ ಪ್ರಾಂತ್ಯಕ್ಕೆ ದಿಗ್ಬಂಧನ ವಿಧಿಸಿದೆ.

ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯಕ್ಕೆ ತಾಲಿಬಾನ್ ಮುತ್ತಿಗೆ: ಆಹಾರ, ಇಂಧನ ಸ್ಥಗಿತ
ಪಂಜ್​ಶಿರ್ ಪ್ರಾಂತ್ಯದಲ್ಲಿ ಕಾವಲು ಕಾಯುತ್ತಿರುವ ಪ್ರತಿರೋಧ ಪಡೆಯ ಹೋರಾಟಗಾರರು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 25, 2021 | 4:09 PM

ಕಾಬೂಲ್: ತಾಲಿಬಾನ್ ಆಡಳಿತಕ್ಕೆ ಪ್ರಬಲ ಪ್ರತಿರೋಧ ತೋರಿರುವ ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯದಲ್ಲಿ ನಾರ್ದರ್ನ್​ ಅಲಯನ್ಸ್​ ಮತ್ತು ಅಫ್ಘಾನ್ ರಾಷ್ಟ್ರೀಯ ಸೇನೆ ಯುದ್ಧ ಸಿದ್ಧತೆ ತೀವ್ರಗೊಳಿಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ತಾಲಿಬಾನಿಗಳು ದೊಡ್ಡ ಸಂಖ್ಯೆಯನ್ನು ಹೋರಾಟಗಾರರನ್ನು ಪಂಜ್​ಶಿರ್​ ಕಣಿವೆಗೆ ನಿಯೋಜಿಸಿದ್ದು, ಇಡೀ ಪ್ರಾಂತ್ಯಕ್ಕೆ ದಿಗ್ಬಂಧನ ವಿಧಿಸಿದೆ.

ಪ್ರಾಂತ್ಯದೊಳಗೆ ಪ್ರವೇಶಿಸಲು ಕೆಲ ಪತ್ರಕರ್ತರಿಗೆ ಅವಕಾಶ ಸಿಕ್ಕಿದೆ. ಅವರು ತಿಳಿಸಿರುವ ಮಾಹಿತಿ ಪ್ರಕಾರ ಪ್ರತಿರೋಧ ತೋರಲು ಅಲ್ಲಿ ದೊಡ್ಡಮಟ್ಟದ ಸಿದ್ಧತೆಯೇ ನಡೆಯುತ್ತಿದೆ. ಹೆವಿ ಮಿಷಿನ್​ ಗನ್​ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿಸಲಾಗಿದೆ. ಸಶಸ್ತ್ರ ವಾಹನಗಳಲ್ಲಿ ಪ್ರತಿರೋಧ ಪಡೆಯ ಹೋರಾಟಗಾರರು ಗಸ್ತು ತಿರುಗುತ್ತಿದ್ದಾರೆ.

ಅಂದರಬ್​ ಕಣಿವೆಯನ್ನು ಇತರ ಪ್ರಾಂತ್ಯಗಳಿಂದ ತಾಲಿಬಾನ್ ಬೇರ್ಪಡಿಸಿದ್ದು, ವೃದ್ಧರು ಮತ್ತು ಮಕ್ಕಳನ್ನು ಜೀವಂತ ಕವಚವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿರೋಧ ಪಡೆಗಳ ನಾಯಕ ಅಮರುಲ್ಲಾ ಸಲೇಹ್ ಹೇಳಿದ್ದಾರೆ.

ಆಸ್ಟ್ರೇಲಿಯಾ ನಾಗರಿಕನ ಮೇಲೆ ಹಲ್ಲೆ ತಾಲಿಬಾನಿಗಳ ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸಗಳು ವರದಿಯಾಗುತ್ತಲೇ ಇವೆ. ಕಾಬೂಲ್​ನಲ್ಲಿ ತಾಲಿಬಾನಿಗಳು ಆಸ್ಟ್ರೇಲಿಯಾದ ನಾಗರಿಕನ ಮೇಲೆ ಮುಖದಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಬ್ರಿಟಿಷ್ ನಾಗರಿಕರ ಏರ್‌ಲಿಫ್ಟ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಬ್ರಿಟನ್​ನ ವಿದೇಶಾಂಗ ಸಚಿವ ರಾಬ್ ಮಾಹಿತಿ ನೀಡಿದ್ದಾರೆ. ಫ್ರೆಂಚ್ ನಾಗರಿಕರ ಏರ್‌ಲಿಫ್ಟ್ ನಾಳೆ ಬಹುತೇಕ ಅಂತ್ಯಗೊಳ್ಳಲಿದೆ ಎಂದು ಫ್ರಾನ್ಸ್​ ಸರ್ಕಾರ ಹೇಳಿದೆ.

(Taliban Blocks Panjshir Province leaders of the Resistance group preparing for full-fledged struggle)

ಇದನ್ನೂ ಓದಿ: Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

Published On - 4:06 pm, Wed, 25 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್