ಮೃತದೇಹದೊಂದಿಗೂ ಸೆಕ್ಸ್ ಮಾಡಿದ ತಾಲಿಬಾನಿಗಳು; ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ

Taliban: ಅಫ್ಘಾನಿಸ್ತಾನದ ಪ್ರತಿ ಮನೆಯಿಂದ ತಮಗೆ ಒಬ್ಬ ಹುಡುಗಿ ಬೇಕು ಎಂದು ಅವರು ಹೇಳಿದರು. ತಾಲಿಬಾನ್ ಹೋರಾಟಗಾರರು ಮಹಿಳೆಯರನ್ನು ಹೊತ್ತುಯ್ಯುತ್ತಾರೆ. ಒಂದು ವೇಳೆ ವಿರೋಧಿಸಿದರೆ ಅವರನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ.

ಮೃತದೇಹದೊಂದಿಗೂ ಸೆಕ್ಸ್ ಮಾಡಿದ ತಾಲಿಬಾನಿಗಳು; ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ
ತಾಲಿಬಾನ್ ಹೋರಾಟಗಾರರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 25, 2021 | 4:28 PM

ದೆಹಲಿ: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಒಂದು ವಾರದ ಹಿಂದೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ನ ಕ್ರೌರ್ಯದ ಬಗ್ಗೆ ಜಗತ್ತಿಗೆ ತಿಳಿದಿದೆ. ಮಹಿಳೆಯರ ಮೇಲೆ ಅವರ ದೌರ್ಜನ್ಯಗಳು ನಡೆದಿದೆ. ಆದರೆ, ಅಫ್ಘಾನಿಸ್ತಾನದಿಂದ ಪರಾರಿಯಾದ ಮಹಿಳೆಯೊಬ್ಬರು ತಾಲಿಬಾನ್ ಹೋರಾಟಗಾರರು ಮೃತದೇಹಗಳೊಂದಿಗೆ ಸೆಕ್ಸ್ ಮಾಡಿದ್ದರು ಎಂಬ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಕಾನ್ ಕಳೆದ ವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ನಂತರ ದೇಶದಿಂದ ಓಡಿ ಭಾರತಕ್ಕೆ ಬಂದಿದ್ದಾರೆ. ಜೀವಭಯದಿಂದ ದೇಶದಿಂದ ಪಾಲಾಯನ ಮಾಡಿದೆ ಎಂದು ಅವರು ಹೇಳಿದ್ದಾರೆ.

“ಅವರು (ತಾಲಿಬಾನಿಗಳು) ಮೃತ ದೇಹಗಳ ಮೇಲೂ ಅತ್ಯಾಚಾರ ಮಾಡುತ್ತಾರೆ. ಅವರು ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಎಂದು ಅವರು ಹೆದರುವುದಿಲ್ಲ. ಇದನ್ನು ನೀವು ಊಹಿಸಬಲ್ಲಿರಾ?” ಎಂದು ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮುಸ್ಕಾನ್ ಹೇಳಿದರು.

ಅಫ್ಘಾನಿಸ್ತಾನದ ಪ್ರತಿ ಮನೆಯಿಂದ ತಮಗೆ ಒಬ್ಬ ಹುಡುಗಿ ಬೇಕು ಎಂದು ಅವರು ಹೇಳಿದರು. ತಾಲಿಬಾನ್ ಹೋರಾಟಗಾರರು ಮಹಿಳೆಯರನ್ನು ಹೊತ್ತುಯ್ಯುತ್ತಾರೆ. ಒಂದು ವೇಳೆ ವಿರೋಧಿಸಿದರೆ ಅವರನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ. “ನಾವು ಪ್ರತಿ ಮನೆಯಿಂದ ಒಬ್ಬ ಹುಡುಗಿಯನ್ನು ಪಡೆಯಬೇಕೆಂದು ಅವರು ಬಯಸುತ್ತಾರೆ. ಒಂದೋ ಹುಡುಗಿಯನ್ನು ಕೊಡಿ, ಇಲ್ಲವೇ ಇಡೀ ಕುಟುಂಬವನ್ನು ಕೊಲ್ಲುತ್ತಾರೆ. 10-12 ವರ್ಷದ ಹುಡುಗಿಯನ್ನು ಕೂಡ ಎತ್ತಿಕೊಂಡು  ಹೋಗುತ್ತಾರೆ.” ನಾವು ಬದಲಾಗಿದ್ದೇವೆ ಎಂದು ಮಾಧ್ಯಮಗಳ ಮುಂದೆ ತಾಲಿಬಾನ್ ಹೇಳುವುದು ಎಲ್ಲಾ ನೆಪ ಮಾತ್ರ ಎಂದಿದ್ದಾರೆ ಮುಸ್ಕಾನ್.

ಯಾವುದೇ ಮಹಿಳೆ ಸರ್ಕಾರಕ್ಕಾಗಿ ಕೆಲಸ ಮಾಡಿದರೆ ಅವಳು ಭಯಾನಕ ಕಷ್ಟವನ್ನು ಅನುಭವಿಸುತ್ತಾಳೆ. “ನೀವು ಕೆಲಸಕ್ಕೆ ಹೋದರೆ, ನಿಮ್ಮ ಕುಟುಂಬ ಅಪಾಯದಲ್ಲಿದೆ. ನಿಮಗೆ ಅಪಾಯವಿದೆ ಎಂದು ನಮಗೆ ಬೆದರಿಕೆ ಹಾಕಲಾಯಿತು. ಅವರು ಎಚ್ಚರಿಕೆ ನೀಡುತ್ತಾರೆ, ಒಪ್ಪದಿದ್ದರೆ ಅವರನ್ನು ಹೊತ್ತೊಯ್ಯುತ್ತಾರೆ ಅಥವಾ ಬಂದು ತಲೆಗೆ ಗುಂಡು ಹಾರಿಸುತ್ತಾರೆ ಎಂದಿದ್ದಾರೆ ಮುಸ್ಕಾನ್.

ಗಮನಾರ್ಹವಾಗಿ, ಹೊಸ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಅತ್ಯಂತ ಅಪಾಯದಲ್ಲಿರುವವರು ಎಂದು ಹೇಳಲಾಗಿದೆ. 90 ರ ದಶಕದಲ್ಲಿ ಜಿಹಾದಿ ಗುಂಪಿನ ಹಿಂದಿನ ಆಡಳಿತಾವಧಿಯಲ್ಲಿ ಸಹ, ಮಹಿಳೆಯರನ್ನು ಕ್ರೂರ ಚಿತ್ರಹಿಂಸೆ ಮತ್ತು ಸಾರ್ವಜನಿಕ ಮರಣದಂಡನೆಯೊಂದಿಗೆ ದಮನಿಸಲಾಗಿತ್ತು.

ಇದನ್ನೂ ಓದಿ: ಉರ್ದು ಮಾತನಾಡುವ ವ್ಯಕ್ತಿಗಳಿಂದ ಕಾಬೂಲ್ ಕಚೇರಿ ಮೇಲೆ ದಾಳಿ; ಭಾರತೀಯ ವೀಸಾ, ಅಫ್ಘಾನ್ ಪಾಸ್​ಪೋರ್ಟ್ ವಶಪಡಿಸಿದ ದುಷ್ಕರ್ಮಿಗಳು

ಇದನ್ನೂ ಓದಿ:  ಪಂಜಾಬ್ ಕಾಂಗ್ರೆಸ್​ನಲ್ಲಿ ಇನ್ನೂ ಶಮನವಾಗಿಲ್ಲ ಭಿನ್ನಮತ; ಹೈಕಮಾಂಡ್ ಮುಂದಿದೆ ದೊಡ್ಡ ಸವಾಲು

(Taliban rape dead bodies too They don’t care whether the person is dead or alive woman who escaped Afghanistan reveals)

Published On - 4:28 pm, Wed, 25 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ