Panjshir: ಪಂಜ್​ಶಿರ್ ನಿಯಂತ್ರಣಕ್ಕೆ ಹರಸಾಹಸ; ತಾಲಿಬಾನಿಗಳ ಬಗಲಲ್ಲಿ ದೊಣ್ಣೆ, ಬಾಯಲ್ಲಿ ಮಾತು

ಪಂಜ್​ಶಿರ್ ಪ್ರಾಂತ್ಯದ ನಾಯಕ ಅಹಮದ್ ಮಸೂದ್ ಈಗಾಗಲೇ ಮಾತುಕತೆಗೂ ಸಿದ್ದ, ಸಮರಕ್ಕೂ ಸಿದ್ದ ಎಂದು ಘೋಷಿಸಿದ್ದಾರೆ.

Panjshir: ಪಂಜ್​ಶಿರ್ ನಿಯಂತ್ರಣಕ್ಕೆ ಹರಸಾಹಸ; ತಾಲಿಬಾನಿಗಳ ಬಗಲಲ್ಲಿ ದೊಣ್ಣೆ, ಬಾಯಲ್ಲಿ ಮಾತು
ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನ್ ಎದುರಿಸಲು ಸಿದ್ಧವಾಗಿರುವ ಪ್ರತಿರೋಧ ಬಣ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 25, 2021 | 7:02 PM

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ತಾಲಿಬಾನ್ ಉಗ್ರರು ಪ್ರವೇಶಿಸಿ ಇಂದಿಗೆ ಹತ್ತು ದಿನವಾಗಿದೆ. ಪಂಜ್​ಶಿರ್ ಪ್ರಾಂತ್ಯದ ಪ್ರತಿರೋಧ ಪಡೆಗಳು ಹಾಗೂ ತಾಲಿಬಾನ್ ಉಗ್ರರ ನಡುವೆ ಘರ್ಷಣೆ ಮುಂದುವರಿದಿದೆ. ಪಂಜ್​ಶಿರ್ ಪ್ರಾಂತ್ಯದ ನಾಯಕರ ಜೊತೆಗೆ ರಾಜಿ ಸಂಧಾನದ ಮಾತುಕತೆ ನಡೆಸಲು 40 ಮಂದಿ ತಾಲಿಬಾನ್ ನಾಯಕರ ನಿಯೋಗ ಪಂಜ್​ಶಿರ್ ಪ್ರಾಂತ್ಯಕ್ಕೆ ಬಂದಿದೆ. ಮಾತುಕತೆಯ ವಿವರಗಳು ಶೀಘ್ರದಲ್ಲಿಯೇ ಸ್ಪಷ್ಟವಾಗಲಿವೆ. ಈ ನಡುವೆ ಅಫ್ಘಾನ್​ನಲ್ಲಿ ತಾಲಿಬಾನ್ ಆಳ್ವಿಕೆಯ ನಿಜಬಣ್ಣ ದಿನದಿಂದ ದಿನಕ್ಕೆ ಬಯಲಾಗುತ್ತಿದೆ.

ಪಂಜ್​ಶಿರ್​ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ತಾಲಿಬಾನ್ ಉಗ್ರರಿಗೆ ಈವರೆಗೆ ಸಾಧ್ಯವಾಗಿಲ್ಲ. ಇದರಿಂದಾಗಿಯೇ ಈಗ ವಿಶ್ವದ ಚಿತ್ತ ಪಂಜಶೀರ್ ಪ್ರಾಂತ್ಯದತ್ತ ನೆಟ್ಟಿದೆ. ಈ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧ ಪ್ರತಿರೋಧದ ಪಡೆಗಳು ಹೇಗೆ ಸಮರ ನಡೆಸುತ್ತವೆ ಎಂಬ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಹೀಗಾಗಿಯೇ ತಾಲಿಬಾನ್ ಸಂಘಟನೆಯು ಪಂಜಶೀರ್ ಪ್ರಾಂತ್ಯದ ಸಿಂಹಗಳ ಜೊತೆಗೆ ರಾಜಿ ಸಂಧಾನದ ಮಾತುಕತೆಯ ಅಸ್ತ್ರವನ್ನು ಬಳಸುತ್ತಿವೆ. ಪಂಜ್​ಶೀರ್ ಪ್ರಾಂತ್ಯದ ನಾಯಕರೊಂದಿಗೆ ರಾಜಿ ಸಂಧಾನದ ಮಾತುಕತೆ ನಡೆಸಲು 40 ಮಂದಿ ತಾಲಿಬಾನ್ ನಾಯಕರ ನಿಯೋಗ ಅಲ್ಲಿಗೆ ಬಂದಿದೆ. ಪಂಜ್​ಶಿರ್ ಪ್ರಾಂತ್ಯದ ಅಹಮದ್ ಮಸೂದ್, ಅಮರುಲ್ಲಾ ಸಲೇಹ್, ಬಿಸ್ಮಿಲ್ಲಾ ಖಾನ್ ಜೊತೆಗೆ ಮಾತುಕತೆ ನಡೆಯುತ್ತಿದೆ.

ಈ ಮಾತುಕತೆಯ ಪೂರ್ಣ ವಿವರಗಳು ನಾಳೆ ಲಭ್ಯವಾಗುವ ನಿರೀಕ್ಷೆ ಇದೆ. ಪಂಜ್​ಶಿರ್ ಪ್ರಾಂತ್ಯದ ನಾಯಕರು ತಾಲಿಬಾನ್ ಮುಂದೆ ಕೆಲ ಬೇಡಿಕೆ, ಷರತ್ತುಗಳನ್ನು ಇಟ್ಟಿದ್ದಾರೆ. ಅಫ್ಘಾನಿಸ್ತಾನದ ಹೊಸ ಸರ್ಕಾರದಲ್ಲಿ ಪಂಜ್​ಶಿರ್ ಪ್ರಾಂತ್ಯದ ನಾಯಕರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸಬೇಕು. ತಜಕಿ ಜನಾಂಗಕ್ಕೂ ಸರ್ಕಾರದಲ್ಲಿ ಪ್ರಾತಿನಿಧ್ಯ ಇರಬೇಕು. ಷರಿಯಾ ಕಾನೂನನ್ನು ಅಫ್ಘಾನಿಸ್ತಾನದಲ್ಲಿ ಜಾರಿಗೆ ತರಬಾರದು. ಪಂಜ್​ಶಿರ್ ಪ್ರಾಂತ್ಯ ಸೇರಿದಂತೆ ದೇಶದ ಅಲ್ಪಸಂಖ್ಯಾತರಿಗೂ ಸರ್ಕಾರದಲ್ಲಿ ಪ್ರಾತಿನಿಧ್ಯ ಇರಬೇಕೆಂದು ಬೇಡಿಕೆ, ಷರತ್ತುಗಳನ್ನು ಇಟ್ಟಿದೆ. ಆದರೆ, ಈ ಬೇಡಿಕೆ, ಷರತ್ತುಗಳನ್ನು ಒಪ್ಪಲು ತಾಲಿಬಾನ್ ಉಗ್ರಗಾಮಿ ಸಂಘಟನೆಯು ತಯಾರಿಲ್ಲ.

ಆದರೂ, ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್, ಪಂಜಶಿರ್​ ಪ್ರಾಂತ್ಯದ ಸಹೋದರರು ನಾವು ಒಂದೇ. ನಮ್ಮ ಉದ್ದೇಶ, ಗುರಿ ಒಂದೇ. ಹೋರಾಟ ಬಿಟ್ಟು ಮಾತುಕತೆಗಾಗಿ ಕಾಬೂಲಿಗೆ ಬನ್ನಿ. ಹೆದರಬೇಡಿ ಎಂದು ಮಾತುಕತೆಗೆ ಕರೆ ನೀಡಿದ್ದಾನೆ.

ಪಂಜ್​ಶಿರ್ ಪ್ರಾಂತ್ಯದ ನಾಯಕ ಅಹಮದ್ ಮಸೂದ್ ಈಗಾಗಲೇ ಮಾತುಕತೆಗೂ ಸಿದ್ದ, ಸಮರಕ್ಕೂ ಸಿದ್ದ ಎಂದು ಘೋಷಿಸಿದ್ದಾರೆ. ಪ್ರಾಂತ್ಯದ ಇತರ ನಾಯಕರು ಹಾಗೂ ತಾಲಿಬಾನ್ ನಡುವಿನ ಮಾತುಕತೆ ಯಶಸ್ವಿಯಾದರೆ, ಅಫ್ಘನ್ ಅಂತರಿಕ ಸಂಘರ್ಷಕ್ಕೆ ಬ್ರೇಕ್ ಬೀಳಲಿದೆ. ಮಾತುಕತೆ ವಿಫಲವಾದರೆ, ಪಂಜ್​ಶಿರ್ ಪ್ರಾಂತ್ಯ ಮತ್ತು ತಾಲಿಬಾನ್ ನಡುವಿನ ಸಂಘರ್ಷ ಮುಂದುವರಿಯಲಿದೆ. ಇಂದೂ ಸಹ ಅಫ್ಘಾನ್ ರಾಷ್ಟ್ರೀಯ ಸೇನೆಯ ಸೈನಿಕರು ಪಂಜ್​ಶಿರ್ ಪ್ರಾಂತ್ಯಕ್ಕೆ ಬಂದು, ಅಮರುಲ್ಲಾ ಸಲೇಹಾ, ಅಹಮದ್ ಮಸೂದ್​ಗೆ ಬೆಂಬಲ ಘೋಷಿಸಿದ್ದಾರೆ.

ಅಫ್ಘಾನ್​ನಲ್ಲಿ ಮತ್ತೆ ಷರಿಯಾ ಶಿಕ್ಷೆ ಜಾರಿ ಅಫ್ಘಾನಿಸ್ತಾನದಲ್ಲಿ ಮತ್ತೆ ಷರಿಯಾ (ಇಸ್ಲಾಮಿಕ್ ಕಾನೂನು) ಶಿಕ್ಷೆಯನ್ನು ಜಾರಿಗೊಳಿಸುವುದಾಗಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಘೋಷಿಸಿದ್ದಾನೆ. ಶಿಕ್ಷೆ ಜಾರಿಗೂ ಮುನ್ನ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ತಪ್ಪು ಮಾಡಿದವರಿಗೆ ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುವುದು, ಸಾರ್ವಜನಿಕವಾಗಿ ಜನರನ್ನು ನೇಣಿಗೇರಿಸುವುದು, ಕಲ್ಲು ಹೊಡೆದು ಸಾಯಿಸುವುದು ಷರಿಯಾ ಶಿಕ್ಷೆಯಲ್ಲಿ ಸೇರಿದೆ.

ಗಾಯಕರು, ಸಿನಿಮಾ ನಿರ್ಮಾಣ ಚಟುವಟಿಕಗಳು ಷರಿಯಾ ವ್ಯಾಪ್ತಿಗೆ ಬರುತ್ತಾವೆಯೇ ಎಂದು ಪರಿಶೀಲಿಸುತ್ತೇವೆ. ಬರದಿದ್ದರೇ, ಗಾಯಕರು, ಸಿನಿಮಾ ನಿರ್ಮಾಣ ಮಾಡುವವರು ಬೇರೆ ವೃತ್ತಿಗೆೆ ಶಿಫ್ಟ್ ಆಗಬೇಕು ಎಂದು ಕೂಡ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾನೆ. ಅಫ್ಘಾನ್​ನಲ್ಲಿ ಹಾಡುಗಳನ್ನು ಕೇಳಲು, ಸಿನಿಮಾ ನೋಡಲು ಅವಕಾಶ ಇರುವುದಿಲ್ಲ. ಜನರಿಗೆ ಮನರಂಜನೆ ಕೂಡ ಇರುವುದಿಲ್ಲ. ಉದ್ಯೋಗಸ್ಥ ಮಹಿಳೆಯರು ಮನೆಯಲ್ಲಿರುವುದು ತಾತ್ಕಾಲಿಕ ಎಂದು ತಾಲಿಬಾನ್ ವಕ್ತಾರ ತಿಳಿಸಿದ್ದಾನೆ.

ಅಫ್ಘಾನಿಸ್ತಾನದ ನಾಗರಿಕರು ದೇಶ ಬಿಟ್ಟು ಹೋಗಬಾರದು ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ. ಆಮೆರಿಕ ಸಹ ಅಫ್ಘಾನ್ ನಾಗರಿಕರು ದೇಶ ಬಿಟ್ಟು ಹೋಗಲು ಪೋತ್ಸಾಹ ಕೊಡಬಾರದು ಎಂದು ಹೇಳಿದೆ. ಪ್ರತಿಭಾವಂತರು ದೇಶ ಬಿಟ್ಟು ಹೋಗದಂತೆ ಸೂಚಿಸಿದೆ. ಸ್ಥಳೀಯರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯಲು ಏರ್​ಪೋರ್ಟ್​ ರಸ್ತೆಯನ್ನೇ ಬಂದ್ ಮಾಡಿದೆ. ಆದರೆ, ಏರ್​ಪೋರ್ಟ್ ಹೊರಗೆ ಈಗಲೂ 20 ಸಾವಿರ ಜನರು ರಸ್ತೆಗಳಲ್ಲಿ ನಿಂತಿದ್ದಾರೆ. ಸುಮಾರು 85 ಸಾವಿರ ಜನರು ಅಫ್ಘಾನಿಸ್ತಾನವನ್ನು ಬಿಟ್ಟು ಹೋಗಲು ತಯಾರಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಆಮೆರಿಕ ಹಾಗೂ ಎಲ್ಲ ವಿದೇಶಿ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಆಗಸ್ಟ್ 31ರೊಳಗೆ ಏರ್​ಲಿಫ್ಟ್ ಮಾಡುವ ಗಡುವಿಗೆ ಬದ್ಧ ಎಂದು ಆಮೆರಿಕ ಅಧ್ಯಕ್ಷ ಜೋ ಬೈಡೆನ್ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಆಗಸ್ಟ್ 31ರೊಳಗೆ ಎಲ್ಲ ವಿದೇಶಿಯರನ್ನು ಏರ್​ಲಿಫ್ಟ್ ಮಾಡಲು ಅಗದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ತುರ್ತು ಯೋಜನೆ ಸಿದ್ಧಪಡಿಸಲು ಆಮೆರಿಕ ರಕ್ಷಣಾ ಇಲಾಖೆಗೆ ಜೋ ಬೈಡೆನ್ ಸೂಚಿಸಿದ್ದಾರೆ. ಇಂದು ಬ್ರಿಟನ್ ನಾಗರಿಕರ ಏರ್​ಲಿಫ್ಟ್ ಪೂರ್ಣಗೊಂಡಿದೆ. ಫ್ರೆಂಚ್ ನಾಗರಿಕರ ಏರ್​ಲಿಫ್ಟ್ ನಾಳೆ ಪೂರ್ಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

(Taliban Trying to win Panjshir Valley Northern Alliance Ahmad Massoud Mounting Stiff Resistance)

ಇದನ್ನೂ ಓದಿ: ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯಕ್ಕೆ ತಾಲಿಬಾನ್ ಮುತ್ತಿಗೆ: ಆಹಾರ, ಇಂಧನ ಸ್ಥಗಿತ

ಇದನ್ನೂ ಓದಿ: Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

Published On - 7:02 pm, Wed, 25 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ