ಐಟಿ ಬಿಟಿ ಸಿಬ್ಬಂದಿಗಳ ವರ್ಕ್ ಫ್ರಮ್ ಹೋಮ್​ಗೆ ಶೀಘ್ರದಲ್ಲೇ ಫುಲ್ ಸ್ಟಾಪ್; ಬೆಂಗಳೂರಿನತ್ತ ಆಗಮಿಸುತ್ತಾರೆ 40 ಲಕ್ಷಕ್ಕೂ ಹೆಚ್ಚು ಜನ

Work From Home: ಈಗಾಗಲೇ ಬಂದ್ ಆಗಿದ್ದ ಕಂಪನಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ಹಂತ ಹಂತವಾಗಿ ಐಟಿ ಕಂಪನಿಗಳು ಓಪನ್ ಆಗಲಿವೆ.

ಐಟಿ ಬಿಟಿ ಸಿಬ್ಬಂದಿಗಳ ವರ್ಕ್ ಫ್ರಮ್ ಹೋಮ್​ಗೆ ಶೀಘ್ರದಲ್ಲೇ ಫುಲ್ ಸ್ಟಾಪ್; ಬೆಂಗಳೂರಿನತ್ತ ಆಗಮಿಸುತ್ತಾರೆ 40 ಲಕ್ಷಕ್ಕೂ ಹೆಚ್ಚು ಜನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on: Aug 25, 2021 | 9:03 AM

ಬೆಂಗಳೂರು: ಮಹಾಮಾರಿ ಕೊರೊನಾ (Coronavirus) ಸೋಂಕನ್ನು ನಿಯಂತ್ರಿಸಲು ಕಳೆದ ಒಂದೂವರೆ ವರ್ಷದಿಂದ ಐಟಿ ಬಿಟಿ ಕಂಪನಿಗಳ (IT BT Company) ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ (Work From Home) ನೀಡಿದ್ದರು. ಆದರೆ ಸದ್ಯದಲ್ಲೆ ವರ್ಕ್ ಫ್ರಮ್ ಹೋಮ್​ಗೆ ಫುಲ್ ಸ್ಟಾಪ್ ಬೀಳುತ್ತದೆ ಎಂದು ತಿಳಿದುಬಂದಿದೆ. ಐಟಿ ಬಿಟಿ ಕಂಪನಿಗಳ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ರದ್ದಾದರೆ ಸುಮಾರು 25 ಲಕ್ಷ ಜನ ಬೆಂಗಳೂರಿಗೆ ಲಗ್ಗೆ ಇಡಲಿದ್ದಾರೆ. 25 ಲಕ್ಷ ಐಟಿ ಸಿಬ್ಬಂದಿ ಜೊತೆಗೆ ಅವರ ಕುಟುಂಬಸ್ಥರು ವಾಪಸ್ ಆಗುತ್ತಾರೆ. ಅಂದಾಜು 40 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನತ್ತ ಆಗಮಿಸಲಿದ್ದಾರೆ.

ಕೊರೊನಾ ಕಾರಣದಿಂದ ಸಿಬ್ಬಂದಿಗಳಿಗೆ ಅನಿವಾರ್ಯವಾಗಿ ಐಟಿ ಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್​ಗೆ ಮಾನ್ಯತೆ ನೀಡಿತ್ತು. ಹೀಗಾಗಿ ಬೆಂಗಳೂರಿನಲ್ಲಿದ್ದವರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದರು. ಒಂದೂವರೆ ವರ್ಷದಿಂದ ಅವರವರ ಊರುಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕೊರೊನಾ ಆರ್ಭಟ ಸದ್ಯ ತಗ್ಗಿದೆ. ಹೀಗಾಗಿ ವರ್ಕ್ ಫ್ರಮ್ ಹೋಂನಲ್ಲಿದ್ದ ಐಟಿ ಬಿಟಿ ಕಂಪನಿಗಳ ಸಿಬ್ಬಂದಿಗಳು ಬೆಂಗಳೂರಿನತ್ತ ಆಗಮಿಸಲಿದ್ದಾರೆ.

ಈಗಾಗಲೇ ಬಂದ್ ಆಗಿದ್ದ ಕಂಪನಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ಹಂತ ಹಂತವಾಗಿ ಐಟಿ ಕಂಪನಿಗಳು ಓಪನ್ ಆಗಲಿವೆ. ಮತ್ತೆ ಮರಳಿ ಬೆಂಗಳೂರಿಗೆ ಬರುವುದರಿಂದ ಬೆಂಗಳೂರಿನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವರ್ಕ್ ಫ್ರಮ್ ಹೋಮ್​ನಿಂದ ಹೋಟೆಲ್ ಉದ್ಯಮ, ಬಾಡಿಗೆ ಮನೆ, ಪಿಜಿ, ಕ್ಯಾಬ್, ಟ್ಯಾಕ್ಸಿಗಳಿಗೆ ದೊಡ್ಡ ಹೊಡೆತ ಆಗಿತ್ತು. ಜನ ಮತ್ತೆ ಬೆಂಗಳೂರಿನತ್ತ ಆಗಮಿಸಿದರೆ ರಾಜ್ಯದ ರಾಜಧಾನಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ವರ್ಕ್ ಫ್ರಮ್ ಹೋಂನಲ್ಲಿ ಕೆಲಸ ನಿರ್ವಹಿಸುವವರಿಗೆ ಕಛೇರಿಗೆ ಬಂದು ಕೆಲಸ ಮಾಡಿದಷ್ಟು ತೃಪ್ತಿ ಸಿಗುತ್ತಿಲ್ಲ. ಹಲವರಿಗೆ ನೆಟ್​ವರ್ಕ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಕಛೇರಿಗೆ ಬಂದು ಕೆಲಸ ಮಾಡುವುದೇ ಸೂಕ್ತ ಎನ್ನುತ್ತಾರೆ. ಇನ್ನು ಕೆಲವರು ಬೆಂಗಳೂರಿಗೆ ಬಂದರೆ ಅಲ್ಲಿನ ಮನೆ ಬಾಡಿಗೆ, ಖರ್ಚು- ವೆಚ್ಚ, ಓಡಾಟ ಇವೆಲ್ಲ ನೋಡಿದರೆ ಊರಿಂದ ಕೆಲಸ ಮಾಡುವುದು ಉತ್ತಮ ಅಂತಾರೆ.

ಇದನ್ನೂ ಓದಿ

Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?

ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ

(work from home of IT BT staff will soon be over so More than 40 lakh people arrive in Bangalore)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ