ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ

ಹೋಮ್ ಹೆಲ್ತ್ ಕೇರ್ ವ್ಯವಸ್ಥೆ ಜನಜೀವನವನ್ನು ಭವಿಷ್ಯದಲ್ಲಿ ಇನ್ನಷ್ಟು ಆವರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 8:27 PM

ಮುಂಬೈ: ಕೊವಿಡ್-19 ಪರಿಸ್ಥಿತಿ ಹಾಗೂ ಲಾಕ್​ಡೌನ್ ಕೇವಲ ಮನೆಯಿಂದ ಕೆಲಸ/ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯನ್ನು ಮಾತ್ರ ಹೆಚ್ಚಿಸಿದ್ದಲ್ಲ. ಬದಲಾಗಿ, ವಿವಿಧ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಔಷಧೋಪಚಾರ ಮಾಡಿಕೊಳ್ಳುವ (ಹೋಮ್ ಹಲ್ತ್ ಕೇರ್) ಜೀವನಶೈಲಿಯನ್ನು ಕೂಡ ರೂಪಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದು ಹೋಮ್ ಹಲ್ತ್ ಕೇರ್ ವಿಧಾನದ ಆರಂಭ ಮಾತ್ರ. ಮುಂಬರುವ ದಿನಗಳಲ್ಲಿ ಇದು ನಮ್ಮ ಜನಜೀವನವನ್ನು ಬಹುವಾಗಿ ಪ್ರಭಾವಿಸಲಿದೆ. ಹೋಮ್ ಹೆಲ್ತ್ ಕೇರ್ ವ್ಯವಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಆವರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಯಲಿಸಿಸ್, ಫಿಸಿಯೋಥೆರಪಿ ಹಾಗೂ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳು ಕೂಡ ಲಾಕ್​ಡೌನ್ ಕಾಲದಲ್ಲಿ ಮನೆಯಲ್ಲೇ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಹಲವಾರು ಮಂದಿ ಟೆಲಿಮೆಡಿಸಿನ್ ಸಮಾಲೋಚನೆಯನ್ನು (ದೂರವಾಣಿ ಮೂಲಕ ಆರೋಗ್ಯ ಸೇವೆ) ಬಳಸಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ನೆಫ್ರಾಲಜಿಸ್ಟ್ ಹಾಗೂ ವೈದ್ಯ, ಡಾ. ಅವಿನಾಶ್ ಇಗ್ನೇಶಿಯಸ್ ಪಿಟಿಐ ಜೊತೆಗೆ ಮಾತನಾಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲೇ ಡಯಾಲಿಸಿಸ್ ಮಾಡಿಕೊಳ್ಳುವ ಅವಕಾಶವಿದೆ. ಆ ತಂತ್ರಜ್ಞಾನವೂ ಲಭ್ಯವಿದೆ. ಅದಕ್ಕಾಗಿ ಡಯಾಲಿಸಿಸ್ ಮಾಡುವಾತನೊಬ್ಬ ಮನೆಗೆ ತೆರಳಿ, ಸೇವೆ ನೀಡುತ್ತಾನೆ ಎಂದು ವಿವರಣೆ ನೀಡಿದ್ದಾರೆ.

ರಕ್ತದೊತ್ತಡ ಪರಿಶೀಲಿಸುವ ಉಪಕರಣಗಳು, ತೂಕ ನೋಡುವ ಯಂತ್ರಗಳು, ಪಲ್ಸ್ ಆಕ್ಸಿಮೀಟರ್​ಗಳನ್ನು ಈಗ ಬಹಳಷ್ಟು ಮನೆಗಳಲ್ಲಿದೆ. ಹಾಗಾಗಿ, ಮನೆಯಲ್ಲೇ ಸಣ್ಣಪುಟ್ಟ ಆರೋಗ್ಯ ಪರಿಶೀಲನೆ ನಡೆಸುವುದು ಸಾಧ್ಯವಾಗಿದೆ. ಮತ್ತೆ ಮತ್ತೆ ಆಸ್ಪತ್ರೆಗೆ ತೆರಳುವುದು ಕಡಿಮೆಯಾಗಿದೆ ಎಂದು ಡಾ. ಅವಿನಾಶ್ ಹೇಳಿದ್ದಾರೆ. ಆದರೆ, ಮನೆಯಲ್ಲಿ ನೀಡಲಾಗುವ ಚಿಕಿತ್ಸಾ ಸೌಲಭ್ಯಕ್ಕಿಂತ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ ಖರ್ಚಿನ ವಿಚಾರ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಜೊತೆಗೆ ಪುಣೆಯ ತಜ್ಞ ವೈದ್ಯ ಮಿನಿಶ್ ಜೈನ್ ಕೂಡ ಮಾತನಾಡಿದ್ದಾರೆ. ಕೆಲವು ವಿಧದ ಕ್ಯಾನ್ಸರ್​ಗಳಿಗೆ ಚಿಕಿತ್ಸೆ ಹಾಗೂ ಕಿಮೋಥೆರಪಿಯನ್ನು ಮನೆಯಲ್ಲಿಯೇ ಪಡೆಯಬಹುದಾಗಿದೆ. ಆದರೆ, ಕಿಮೋಥೆರಪಿ ಚಿಕಿತ್ಸೆಯನ್ನು ಮನೆಯಲ್ಲೇ ಪಡೆಯುವ ಸೌಲಭ್ಯವು ಭಾರತದಲ್ಲಿ ಅಷ್ಟಾಗಿ ಪ್ರಚಲಿತದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಮಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂಜರಿಕೆ ತೋರಿದ್ದರು. ಅಂಥವರು ಮನೆಯಲ್ಲೇ ಕಿಮೋಥೆರಪಿ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಶೀಘ್ರವೇ ವರ್ಕ್​ ಫ್ರಮ್​ ಹೋಂ ಅಂತ್ಯ?: ಸೂಚನೆ ಕೊಟ್ಟ ದೊಡ್ಡ ಐಟಿ ಕಂಪೆನಿಗಳು

Published On - 6:44 pm, Sat, 30 January 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ