ಹುಣಸೋಡು ಸ್ಫೋಟ: ಕ್ರಷರ್​ಗೆ ನೀಡಿದ್ದ ಲೈಸೆನ್ಸ್​ ರದ್ದು ಪಡಿಸಿದ ಜಿಲ್ಲಾಧಿಕಾರಿ

ಜನವರಿ 21ರಂದು ನಡೆದ ದುರಂತದ ಬಳಿಕ ಸುಧಾಕರ್​ ಸೇರಿ ನಾಲ್ವರ ಬಂಧನವಾಗಿದೆ. ಇದರ ಬೆನ್ನಲ್ಲೇ ಕಲ್ಲುಪುಡಿ ಮಾಡಲು ಕ್ರಷರ್​ಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.

ಹುಣಸೋಡು ಸ್ಫೋಟ: ಕ್ರಷರ್​ಗೆ ನೀಡಿದ್ದ ಲೈಸೆನ್ಸ್​ ರದ್ದು ಪಡಿಸಿದ ಜಿಲ್ಲಾಧಿಕಾರಿ
ಪ್ರಾತಿನಿಧಿಕ ಚಿತ್ರ
Lakshmi Hegde

| Edited By: sadhu srinath

Jan 30, 2021 | 5:51 PM

ಶಿವಮೊಗ್ಗ: ಜನವರಿ 21ರಂದು ಹುಣಸೋಡಿನಲ್ಲಿ ಸ್ಫೋಟ ನಡೆದ ಕ್ರಷರ್​ನ ಲೈಸೆನ್ಸ್​ ರದ್ದುಗೊಳಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ನೀಡಿದ್ದಾರೆ.

ಹುಣಸೋಡು ಗ್ರಾಮದ ಕಲ್ಲಗಂಗೂರ ಬಳಿ 5 ಎಕರೆ ಜಾಗವನ್ನು ಲೀಸ್​​ಗೆ ಪಡೆದು, ಕ್ರಷರ್​ ನಡೆಸಲಾಗುತ್ತಿತ್ತು. ಎಸ್​.ಎಸ್​.ಸ್ಟೋನ್ ಹೆಸರಿನ ಈ ಕ್ರಷರ್​ನ ಮಾಲೀಕ ಬಿ.ವಿ.ಸುಧಾಕರ್​. ಜನವರಿ 21ರಂದು ನಡೆದ ದುರಂತದ ಬಳಿಕ ಸುಧಾಕರ್​ ಸೇರಿ ನಾಲ್ವರ ಬಂಧನವಾಗಿದೆ. ಇದರ ಬೆನ್ನಲ್ಲೇ ಕಲ್ಲುಪುಡಿ ಮಾಡಲು ಕ್ರಷರ್​ಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.

ಹುಣಸೋಡು ಪ್ರಕರಣ ತನಿಖೆಗೆ ಸರಕಾರಿ ಆದೇಶವೇ ಹೊರಬಿದ್ದಿಲ್ಲ! ಆದ್ರೆ ಗಣಿಗಾರಿಕೆ ಪರವಾನಿಗೆ ಕೋರಿದ್ದ 23 ಹೊಸ ಅರ್ಜಿ ವಜಾ..

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada