ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ಜಟಾಪಟಿ.. ನೀ ಕೊಡೆ-ನಾ ಬಿಡೆ..!
ಜನವರಿ 27 ರಂದು ಸರ್ಕಾರ ಆದೇಶ ಹೊರಡಿಸಿದೆ. ಈಗ ಸವಿತಾ ಕಾಳೆಗೆ, ಅಶೋಕ ಬಸಣ್ಣವರ ಅಧಿಕಾರ ಬಿಟ್ಟು ಕೊಡದೆ ಸತಾಯಿಸುತ್ತಿದ್ದಾರೆ.
ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಅಧಿಕಾರ ಬಿಟ್ಟುಕೊಡುವ ಬಗ್ಗೆ ಜಟಾಪಟಿ ಶುರುವಾಗಿದೆ.
ಅಶೋಕ ಬಸಣ್ಣವರ ಹಾಗೂ ಸವಿತಾ ಕಾಳೆ ನಡುವೆ ಕುರ್ಚಿ ಕದನ ಏರ್ಪಟ್ಟಿದೆ. ಅಶೋಕ ಬಸಣ್ಣವರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯಲ್ಲಿ ಪ್ರಭಾರಿ ಆಗಿದ್ದರು. ಈಗ ಉಪನಿರ್ದೇಶಕ ಹುದ್ದೆಗೆ ಪ್ರಭಾರಿಯಾಗಿ ಸವಿತಾ ಕಾಳೆಯವರನ್ನು ಸರ್ಕಾರ ನೇಮಿಸಿದೆ. ಸವಿತಾ ಕಾಳೆ ವಿಕಲಚೇತನ, ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸವಿತಾ ಕಾಳೆ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಡಿಡಿ ಹುದ್ದೆಗೆ ಪ್ರಭಾರಿಯಾಗಿ ಸರ್ಕಾರ ನೇಮಿಸಿದೆ. ಈ ಬಗ್ಗೆ ಜನವರಿ 27 ರಂದು ಸರ್ಕಾರ ಆದೇಶ ಹೊರಡಿಸಿದೆ. ಈಗ ಸವಿತಾ ಕಾಳೆಗೆ, ಅಶೋಕ ಬಸಣ್ಣವರ ಅಧಿಕಾರ ಬಿಟ್ಟು ಕೊಡದೆ ಸತಾಯಿಸುತ್ತಿದ್ದಾರೆ.
ಎರಡು ದಿನಗಳಿಂದ ಕುರ್ಚಿಗಾಗಿ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಮಾತೃ ಇಲಾಖೆ ಆದೇಶದ ಅನ್ವಯ ಅಧಿಕಾರ ವಹಿಸಿಕೊಳ್ಳಬೇಕು. ಆದರೆ, ಅಧಿಕಾರ ವಹಿಸಿಕೊಳ್ಳದಂತೆ ಮಹಿಳಾ ಅಧಿಕಾರಿಗೆ ಒತ್ತಡ ಹಾಕ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ.
ಕೈ ಕೈ ಮಿಲಾಯಿಸಿದ ಕೈ ನಾಯಕರು! KPCC ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಮಾರಾಮಾರಿ?