ಸರ್ಕಾರದ ಸೂಚನೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಶುರುವಾಗಿತ್ತು: ಜಿ ಪರಮೇಶ್ವರ್
ತಮಗೆ ಪೊಲೀಸರ ನೀಡಿರುವ ಮಾಹಿತಿ ಪ್ರಕಾರ, ಪ್ರತಿಭಟನೆಯ ಮೊದಲ ದಿನ 3-4 ಜನ ಸಾವಿರ ಸೇರಿದ್ದರು, ಮೇ 31ರಂದು ಸುಮಾರು ಒಂದು ಸಾವಿರ ಜನ ಪ್ರತಿಭಟನೆಕಾರರು ಸ್ಥಳದಲ್ಲಿದ್ದರು ಎಂದು ಹೇಳಿದ ಪರಮೇಶ್ವರ್, ಧರಣಿ ನಡೆಸುತ್ತಿದ್ದವರು ಕಾಮಗಾರಿ ನಿಲ್ಲಿಸುವುದಕ್ಕೆ ಮುಂದಾದಾಗ ಪೊಲೀಸರು ತಡೆಯುವ ಪ್ರಯತ್ನ ಮಾಡಿದ್ದಾರೆ, ಆಗ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ ನಡೆದಿದೆ ಎಂದು ಹೇಳಿದರು.
ತುಮಕೂರು, ಜೂನ್ 2: ಹೇಮಾವತಿ ಲಿಂಕ್ಗೆ ಕೆನಾಲ್ (Hemavati Link Canal) ಸಂಬಂಧಿಸಿದಂತೆ ತುಮಕೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್, ಮೇ 31ರಂದು ಏನು ನಡೆದಿದೆ ಅನ್ನೋದನ್ನು ವಿವರಿಸಿದರು. ಕಾಮಗಾರಿ ಶುರುಮಾಡಿದ ಗುತ್ತಿಗೆದಾರರು ಸರ್ಕಾರದ ಸೂಚನೆ ಮೇರೆಗೆ ಅದನ್ನು ಮಾಡಿದ್ದರು, ಅದರೆ ಶಾಸಕರಾದ ಬಿ ಸುರೇಶ್ ಗೌಡ, ಜ್ಯೋತಿ ಗಣೇಶ್ ಮತ್ತು ಕೃಷ್ಣಪ್ಪ ಸೇರಿದಂತೆ ಹಲವಾರು ಜನ ಟಿ ರಾಂಪುರ ಎಂಬಲ್ಲಿ ಒಂದುಗೂಡಿ ಧರಣಿ ನಡೆಸಿದ್ದಾರೆ ಮತ್ತು ಕೆನಾಲ್ ಕೆಲಸವನ್ನು ನಿಲ್ಲಿಸಿದ್ದಾರೆ. ಜಿಲ್ಲಾಡಳಿತ, ಕಾನೂನಿಗೆ ವಿರುದ್ಧವಾಗಿ ಹೋಗೋದು ಬೇಡ ಪ್ರತಿಭಟನೆಕಾರರಿಗೆ ಮನವೊಲಿಸುವ ಪ್ರಯತ್ನ ಮಾಡಿದರೂ ಅವರು ಮಾತು ಕೇಳಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಕರಾವಳಿ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗಿತ್ತು: ಜಿ ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ