ಕರಾವಳಿ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗಿತ್ತು: ಜಿ ಪರಮೇಶ್ವರ್
ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ದುಷ್ಟಶಕ್ತಿಗಳು ಸರ್ಕಾರವನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿರುವಂತಿದೆ, ಅದರೆ ಸರ್ಕಾರ ಇನ್ನು ಸಹಿಸಿಕೊಳ್ಳುವುದಿಲ್ಲ, ಅಲ್ಲಿನ ಪ್ರಜ್ಞಾವಂತ ಜನ ಸರ್ಕಾರದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಹೊಸದಾಗಿ ಬರುವ ಪೊಲೀಸ್ ಕಮೀಶನರ್ ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಮತ್ತು ತಾನು ಸೂಚನೆ ನೀಡಿರುವುದಾಗಿ ಪರಮೇಶ್ವರ್ ಹೇಳಿದರು.
ಬೆಂಗಳೂರು, ಮೇ30: ಕರಾವಳಿ ಪ್ರಾಂತ್ಯದಲ್ಲಿ (coastal region) ನಡೆಯುತ್ತಿರುವ ಘಟನಾವಳಿಗಳನ್ನು ಸರ್ಕಾರ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ, ಅ ಭಾಗದಲ್ಲಿ ಶಾಂತಿ ಕದಡುವ ಜನ ಯಾರೇ ಆಗಿರಲಿ, ಸರ್ಕಾರ ಸುಮ್ಮನೆ ಬಿಡಲ್ಲ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಕರಾವಳಿ ಭಾಗದಲ್ಲಿ ಹತ್ಯೆಗಳು ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ದಕ್ಷಣ ಕನ್ನಡ ಜಿಲ್ಲೆಯ ಪೊಲೀಸ್ ಕಮೀಶನರ್, ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಡುಪಿಯ ಎಸ್ಪಿಯನ್ನು ವರ್ಗಾವಣೆಯನ್ನು ಮಾಡಲಾಗಿದೆ, ದಕ್ಷಿಣ ಕನ್ನಡ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ರಾಜ್ಯಕ್ಕೆ ಬಹಳ ಮುಖ್ಯವಾದ ಜಿಲ್ಲೆಯಾಗಿದೆ, ಹಾಗಾಗಿ ಅಲ್ಲಿ ಶಾಂತಿ ನೆಲಸುವುದು ಜನ ಸೌಹಾರ್ದತೆಯಿಂದ ಬಾಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಗೃಹ ಸಚಿವ ಹೇಳಿದರು.
ಇದನ್ನೂ ಓದಿ: ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಮಾಹಿತಿ ಸಂಗ್ರಹಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ: ಗಡೀಪಾರಿಗೆ ಕ್ರಮ ಕೈಗೊಳ್ಳುವ ಭರವಸೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

