ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ವಿಚಾರದಲ್ಲಿ ಶಿವಕುಮಾರ್ ಒಬ್ಸೆಸ್ಡ್ ಅಗಿದ್ದಾರೆ
ಕರಾವಳಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರೋದು, ಮೇಲಿಂದ ಮೇಲೆ ಕೊಲೆಗಳು ನಡೆಯುತ್ತಿರೋದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಡಿಸ್ಟರ್ಬ್ ಮಾಡಿದೆ. ಇವತ್ತಿನ ಸಭೆಯಲ್ಲಿ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇದೇ ವಿಷಯದ ಹಿನ್ನೆಲೆಯಲ್ಲಿ ತಾಕೀತು ಮಾಡಿದರು. ಗಲಭೆ ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೆತ್ತಿಕೊಳ್ಳುವುದು ಬುದ್ಧಿವಂತಿಕೆ ಎಂದು ಹೇಳಿದರು.
ಬೆಂಗಳೂರು, ಮೇ 30: ಡಿಸಿಎಂ ಡಿಕೆ ಶಿವಕುಮಾರ್ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಮರನಾಮಕರಣ ಮಾಡಿ ಬಹಳ ಸಂತೋಷದಲ್ಲಿದ್ದಾರೆ. ಇಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಕುಮಾರ್ ಅವರ ಸಂತಸ ವೇದ್ಯವಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಪ್ರಜಾಸೌಧ ಮಂಜೂರಾತಿ ಪತ್ರಗಳನ್ನು ವಿತರಿಸುವಾಗ, ಅದನ್ನು ಸ್ವೀಕರಿಸಲು ಬಂದ ರಾಮನಗರ ಜಿಲ್ಲಾಧಿಕಾರಿಗೆ ಶಿವಕುಮಾರ್, ಇನ್ನು ಮುಂದೆ ಎಲ್ಲ ಕಡತ, ದಾಖಲಾತಿ ಪತ್ರಗಳಲ್ಲಿ ಮತ್ತು ಬೋರ್ಡ್ಗಳಲ್ಲಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಉಲ್ಲೇಖಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ರಾಮನಗರ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುವುದು: ಡಿಕೆ ಶಿವಕುಮಾರ್, ಡಿಸಿಎಂ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ