ಚಾರ್ಮಾಡಿ ಘಾಟ್: ಗುಡ್ಡಕುಸಿತ ನೋಡಿದ್ದಾಯ್ತು, ಇನ್ನು ಮರಗಳು ಉರುಳಿ ರಸ್ತೆಗೆ ಬೀಳುವ ಸರದಿ!
ಚಾರ್ಮಾಡಿ ಘಾಟ್ನಲ್ಲಿ ಪದೇಪದೇ ಗುಡ್ಡಕುಸಿತ ಉಂಟಾಗುತ್ತಿರುವುದರಿಂದ ಪ್ರತಿದಿನ ಚರ್ಚೆಯಲ್ಲಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಮೂರು ವಾರಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಚಾರ್ಮಾಡಿ ಘಾಟ್ನಲ್ಲಿರುವ ಗುಡ್ಡಗಳಲ್ಲಿ ಬಿರುಕುಗಳು ಕಾಣಿಸುತ್ತಿವೆ. ರಸ್ತೆಗಳ ಅಗಲೀಕರಣ ಕಾರ್ಯಗಳಿಂದಲೂ ಬೆಟ್ಟಪ್ರದೇಶ ಶಿಥಿಲಗೊಳ್ಳುತ್ತಿದೆ ಎಂದು ಪರಿಸರವಾದಿಗಳು ಮತ್ತು ಆ ಭಾಗದ ನಿವಾಸಿಗಳು ಹೇಳುತ್ತಿದ್ದಾರೆ.
ಚಿಕ್ಕಮಗಳೂರು, ಜೂನ್ 2: ಚಾರ್ಮಾಡಿ ಘಾಟ್ ಮೂಲಕ ತಿರುಗಾಡುವ ವಾಹನ ಸವಾರರಿಗೆ ಇದೊಳ್ಳೆ ಪೀಕಲಾಟ ಮಾರಾಯ್ರೇ. ಒಂದೋ ಗುಡ್ಡ ಕುಸಿದು ರಸ್ತೆ ಬ್ಲಾಕ್ ಆಗುತ್ತದೆ ಇಲ್ಲವೇ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರವನ್ನು ಅಕ್ಷರಶಃ ನಿಲುಗಡೆಗೆ ತರುತ್ತದೆ. ಇಲ್ನೋಡಿ, ರಾಷ್ಟ್ರೀಯ ಹೆದ್ದಾರಿ 73 ರಲ್ಲಿ (National Highway 73) ಬೃಹತ್ ಗಾತ್ರದ ಮರವೊಂದು ಉರುಳಿ ರಸ್ತೆಗೆ ಬಿದ್ದಿದೆ. ನಡುರಸ್ತೆಯಲ್ಲಿ ಮರ ಉರುಳಿ ಬಿದ್ದಿರುವುದರಿಂದ ಕಿಲೋಮೀಟರ್ ಗಟ್ಟಲೆ ರಸ್ತೆ ಜಾಮ್ ಆಗಿದೆ. ಎರಡೂ ಬದಿಯ ವಾಹನಗಳು ಸ್ತಬ್ಧವಾಗಿವೆ ಮತ್ತು ಸವಾರರು ಅಸಹಾಯಕತೆಯಿಂದ ಬುಲ್ಡೋಜರೊಂದು ಮರವನ್ನು ತೆರವುಗೊಳಿಸುತ್ತಿರುವ ದೃಶ್ಯ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹುಚ್ಚು ಸಾಹಸಗಳನ್ನು ಮುಂದುವರಿಸಿರುವ ಅಲ್ಪಮತಿ ಪ್ರವಾಸಿಗರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ