ರಾಜಕೀಯದಲ್ಲಿ ನನ್ನನ್ನು ಗುರುತಿಸಿ ಬೆಳೆಸಿದ್ದು ಮಾಜಿ ಸಂಸದೆ ಮಾರ್ಗರೆಟ್ ಆಳ್ವಾ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ಮುಂದುವರಿದು ಮಾತಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ತನ್ನ ಬೆಳವಣಿಗೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಹ ಕಾರಣವಾಗಿದ್ದಾರೆ ಎಂದರು. ಇವತ್ತು ಒಂದು ಜನಪ್ರಿಯ ಸರ್ಕಾರದ ಭಾಗವಾಗಿದ್ದೇನೆ, ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 6ತಿಂಗಳು ಸಹ ಬಾಳಲ್ಲ ಎಂದು ಬಿಜೆಪಿ ನಾಯಕರು ಮೂದಲಿಸಿದ್ದರು ಎಂದು ಸಚಿವೆ ಹೇಳಿದರು.
ಬೆಂಗಳೂರು, ಜೂನ್ 2: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ತಾನು ರಾಜಕಾರಣದಲ್ಲಿ ರಾಜ್ಯದ ಒಬ್ಬ ಮಂತ್ರಿಯಾಗುವಷ್ಟು ಬೆಳೆಯಲು ಮಾಜಿ ಸಂಸದೆ ಮಾರ್ಗರೆಟ್ ಆಳ್ವಾ ಕಾರಣವೆಂದು ಹೇಳಿದರು. ಮೊದಲಿಗೆ ಅವರು ಖಾನಾಪುರದಲ್ಲಿ ತನ್ನನ್ನು ಗುರುತಿಸಿ ಬೂತ್ ಏಜೆಂಟ್ ಆಗಿ ನೇಮಕ ಮಾಡಿದ್ದರು ಮತ್ತು ನಂತರ 1999ರಲ್ಲಿ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆ ಒಟ್ಟಿಗೆ ನಡೆದಾಗ ಅವರು ಪ್ರತಿನಿಧಿಸುತ್ತಿದ್ದ ಉತ್ತರ ಕನ್ನಡ ಕ್ಷೇತ್ರಕ್ಕೆ ಕೌಟಿಂಗ್ ಏಜೆಂಟ್ ಆಗಿ ಕರೆಸಿಕೊಂಡಿದ್ದರು ಎಂದ ಹೆಬ್ಬಾಳ್ಕರ್, ಆಗ ಈವಿಎಂಗಳು ಬಂದಿರಲಿಲ್ಲ, ಬ್ಯಾಲಟ್ ಪೇಪರ್ಗಳ ಮೂಲಕ ಚುನಾವಣೆ ನಡೆಯುತ್ತಿತ್ತು ಎಂದರು.
ಇದನ್ನೂ ಓದಿ: ಪರಿಷತ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ ಪ್ರಕರಣ ಒಂದು ಕೆಟ್ಟ ಘಳಿಗೆ ಎಂದ ಎಮ್ಮೆಲ್ಸಿ ಸಿಟಿ ರವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ