ಪಶ್ಚಿಮ ಘಟ್ಟದ ಮೂಲಕ ಹಾದು ಹೋಗುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭೀತಿ ಮತ್ತು ಆತಂಕದ ಛಾಯೆ
ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಮತ್ತು ಮಂಗಳೂರು ನಡುವಿನ ಸಂಪರ್ಕ ರಸ್ತೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಕಳೆದ 20 ದಿನಗಳಿಂದ ಒಂದೇ ಸಮನೆ ಮಳೆಯಾಗುತ್ತಿರುವುದರಿಂದ ಗುಡ್ಡ ಕುಸಿತದ ಆತಂಕ ದಿನೇ ದೀನೇ ಹೆಚ್ಚುತ್ತಿದೆ. ಈ ರಸ್ತೆಯಲ್ಲಿ ಓಡಾಡುವ ಜನ ಮತ್ತು ವಾಹನ ಸವಾರರು ಅಕ್ಷರಶಃ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪಯಣಿಸುತ್ತಿದ್ದಾರೆ.
ಚಿಕ್ಕಮಗಳೂರು, ಮೇ 31: ಪ್ರತಿ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಚರ್ಚೆಯ ವಿಷಯವಾಗುತ್ತಿದೆ. ಕಳೆದ ವರ್ಷ ನಡೆದ ಘೋರ ದುರಂತ ಈಗಲೂ ಕನ್ನಡಿಗರನ್ನು ಬೆವರುವಂತೆ ಮಾಡುತ್ತದೆ. ನಮ್ಮ ಚಿಕ್ಕಮಗಳೂರು ವರದಿಗಾರ ಚಾರ್ಮಾಡಿ ಘಾಟ್ ಮೂಲಕ ಹಾದುಹೋಗುವ ರಸ್ತೆ ಯಾಕೆ ಅಪಾಯಕಾರಿಯಾಗಿ (dangerous) ಪರಿಣಮಿಸುತ್ತಿದೆ ಅನ್ನೋದನ್ನು ವಿವರಿಸಿದ್ದಾರೆ. ಇವರು ಗುಡ್ಡದ ಪೂರ್ತಿ ಮೇಲ್ಭಾಗದಲ್ಲಿ ನಿಂತಿರುವುದರಿಂದ ಘಾಟ್ ಮೂಲಕ ಹಾದು ಹೋಗುವ ರಸ್ತೆಯನ್ನು ಮತ್ತು ಗುಡ್ಡ ಕುಸಿತ ಎಲ್ಲೆಲ್ಲಿ ಉಂಟಾಗಿದೆ ಅನ್ನೋದನ್ನು ನೋಡಬಹುದಾಗಿದೆ. ಘಾಟ್ ಪ್ರದೇಶದಲ್ಲಿ ಸುಮಾರು 10 ಕಡೆ ಕುಸಿತವುಂಟಾಗಿದೆ. ಚಾರ್ಮಾಡಿ ಗುಡ್ಡಗಾಡು ಪ್ರದೇಶ ಕಣ್ಣಿಗೆ ಎಷ್ಟು ರಮಣೀಯವೋ ಅಷ್ಟೇ ಅಪಾಯಕಾರಿಯೂ ಹೌದು.
ಇದನ್ನೂ ಓದಿ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹುಚ್ಚು ಸಾಹಸಗಳನ್ನು ಮುಂದುವರಿಸಿರುವ ಅಲ್ಪಮತಿ ಪ್ರವಾಸಿಗರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ