ಹೆಸರಲ್ಲಿ ರಾಮ ಇರುವ ಮಾತ್ರಕ್ಕೆ ಯಾರೂ ರಾಮನ ಭಕ್ತನಾಗಲ್ಲ, ಸಿದ್ದರಾಮಯ್ಯನೂ ಅಷ್ಟೇ: ಆರ್ ಅಶೋಕ
ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸುವ ಹವಣಿಕೆಯಲ್ಲಿದೆಯಂತೆ. ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅದನ್ನು ಹೇಳಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳು ಹಣ ನೀಡುತ್ತೇವೆ ಅಂತ ಹೇಳಿದ್ದೀವಾ ಅನ್ನುತ್ತಾರೆ, ಇವರ ಮಾತುಗಳನ್ನು ಗಮನಿಸಿ ಎಂದು ಅಶೋಕ ಹೇಳಿದರು.
ಬೆಂಗಳೂರು, ಜೂನ್ 2: ಯಾರಾದರೂ ತನ್ನ ಹೆಸರಲ್ಲಿ ರಾಮ ಅಂತ ಸೇರಿಸಿಕೊಂಡಿದ್ದರೆ ಅವನೇನೂ ರಾಮನ ಭಕ್ತನಾಗಲಾರ, ಯಾರೋ ಒಬ್ಬ ಮಹಿಳೆಯ ಹೆಸರು ಧನಲಕ್ಷ್ಮಿ ಅಂತ ಇತ್ತು, ಆದರೆ ಆಕೆಯ ಮನೆಯಲ್ಲಿ ನಿತ್ಯ ದಾರಿದ್ರ್ಯ, ಆದರೆ ದರಿದ್ರ ಲಕ್ಷ್ಮಿ ಅಂತ ಹೆಸರಿಟ್ಟುಕೊಂಡವಳ ಮನೆಯಲ್ಲಿ ಸುಭಿಕ್ಷೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯನವರ (Siddaramaiah) ತಂದೆತಾಯಿ ಮಗನ ಹೆಸರಲ್ಲಿ ರಾಮನ ಹೆಸರನ್ನು ಸೇರಿಸಿದ ಮಾತ್ರಕ್ಕೆ ಸಿದ್ದರಾಮಯ್ಯ ದೊಡ್ಡ ಹಿಂದೂವಾಗಲಾರರು, ನಾನೊಬ್ಬ ಹಿಂದೂ ಅಂತ ಅವರು ತಾವೇ ಹೇಳಿಕೊಳ್ಳುತ್ತಾರೆ, ಅದರಿಂದ ಪ್ರಯೋಜನವೇನು ಬಂತು? ಬೇರೆಯವರು ಆ ಮಾತನ್ನು ಹೇಳಬೇಕು, ಕೇವಲ ಸಂಕಟ ಬಂದಾಗ ಹಣೆಗೆ ತಿಲಕವಿಡುವ ಸಿದ್ದರಾಮಯ್ಯ ಹಿಂದೂ ಹೇಗಾಗುತ್ತಾರೆ ಎಂದು ಅಶೋಕ ಪ್ರಶ್ನಿಸಿದರು.
ಇದನ್ನೂ ಓದಿ: ಕ್ರಿಕೆಟ್ ಪಂದ್ಯ ನೋಡುತ್ತಾ ಸಮೋಸಾ ತಿನ್ನಲು ಸಿದ್ದರಾಮಯ್ಯಗೆ ಸಮಯವಿದೆ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಇಲ್ಲ: ಆರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ