ಏಕಪಕ್ಷೀಯವಾಗಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ ವಾಲಿಬಾಲ್ ತಂಡ; ವಿಡಿಯೋ ನೋಡಿ
CAVA Nations League Update: ಭಾರತದ ಪುರುಷರ ವಾಲಿಬಾಲ್ ತಂಡವು ಉಜ್ಬೇಕಿಸ್ತಾನದ ಫರ್ಗಾನಾದಲ್ಲಿ ನಡೆದ ಸೆಂಟ್ರಲ್ ಏಷ್ಯನ್ ವಾಲಿಬಾಲ್ ಅಸೋಸಿಯೇಷನ್ (ಸಿಎವಿಎ) ರಾಷ್ಟ್ರಗಳ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿದೆ. ಒಂದೂವರೆ ಗಂಟೆಗಿಂತ ಕಡಿಮೆ ಸಮಯದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು.
ಸೋಮವಾರ ಉಜ್ಬೇಕಿಸ್ತಾನದ ಫರ್ಗಾನಾದಲ್ಲಿ ನಡೆದ ಸೆಂಟ್ರಲ್ ಏಷ್ಯನ್ ವಾಲಿಬಾಲ್ ಅಸೋಸಿಯೇಷನ್ (ಸಿಎವಿಎ) ನೇಷನ್ಸ್ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ವಾಲಿಬಾಲ್ ತಂಡವು ಎದುರಾಳಿ ಪಾಕಿಸ್ತಾನವನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಅಮೋಘ ಗೆಲುವು ದಾಖಲಿಸಿತು. ಒಂದೂವರೆ ಗಂಟೆಗಿಂತ ಕಡಿಮೆ ಸಮಯ ನಡೆದ ಈ ಪಂದ್ಯದಲ್ಲಿ ಭಾರತ 25-19, 25-19, 25-23 ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿ ಜಯದ ನಗೆ ಬೀರಿತು.
ಆರಂಭದಿಂದಲೂ ಪಾಕಿಸ್ತಾನ ತಂಡದ ಮೇಲೆ ಪ್ರಾಬಲ್ಯ ಮೆರೆದ ಭಾರತ ತಂಡ ಮೊದಲ ಎರಡು ಸೆಟ್‌ಗಳಲ್ಲಿ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಆದರೆ ಮೂರನೇ ಸೆಟ್‌ನಲ್ಲಿ ಪಾಕಿಸ್ತಾನ ತಂಡ ಕೊಂಚ ಪ್ರತಿರೋಧ ತೊರಲು ಪ್ರಯತ್ನಿಸಿ ಪಂದ್ಯದ ಹಂತದಲ್ಲಿ ಭಾರತದ ಮುನ್ನಡೆಯನ್ನು ಎರಡಕ್ಕೆ ಇಳಿಸಿತು. ಆದಾಗ್ಯೂ ಮತ್ತೆ ಪುಟಿದೆದ್ದ ಭಾರತ ಏಕಪಕ್ಷೀಯ ಗೆಲುವು ಸಾಧಿಸಿತು.ಪ್ರಸ್ತುತ ಪಂದ್ಯಾವಳಿಯಲ್ಲಿ ಆಡಿರುವ ಏಳು ಪಂದ್ಯಗಳ ನಂತರ, ಭಾರತ ಮೂರು ಗೆಲುವು ಮತ್ತು ಒಂದು ಸೋಲು ಮತ್ತು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.
ಟೂರ್ನಿಯ ಆರಂಭದಲ್ಲಿ, ಉಭಯ ದೇಶಗಳ ಗಡಿ ಉದ್ವಿಗ್ನತೆಯಿಂದಾಗಿ ಭಾರತ, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯಿಂದ ಹಿಂದೆ ಸರಿದಿತ್ತು. ಆದಾಗ್ಯೂ, ಈ ಪಂದ್ಯಾವಳಿಯನ್ನು ಉಜ್ಬೇಕಿಸ್ತಾನ್‌ಗೆ ಸ್ಥಳಾಂತರಿಸಿದ ನಂತರ ಭಾರತ ತಂಡವು ಭಾಗವಹಿಸಲು ನಿರ್ಧರಿಸಿತು.