Budget 2021 | ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡ ಆರ್ಥಿಕ ವರದಿ
ಸದ್ಯ ಜಾರಿಯಲ್ಲಿರುವ ಬೆಳೆಗಳ ಉತ್ಪಾದನೆ, ಸಂಗ್ರಹ, ರವಾನೆ, ವಿತರಣೆಗಳ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದನ್ನು ಆರ್ಥಿಕ ಸಮೀಕ್ಷೆ ಬಹುವಾಗಿ ಸಮರ್ಥಿಸಿಕೊಂಡಿದೆ.
ದೆಹಲಿ: ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನೂತನ ಕೃಷಿ ಕಾಯ್ದೆಗಳನ್ನು ಸರ್ಕಾರ ಸಮರ್ಥಿಸಿಕೊಂಡಿರುವುದು ಅರಿವಿಗೆ ಬರುತ್ತದೆ. ಕೃಷಿ ಕಾಯ್ದೆಗಳಿಂದ ರೈತರ ಸರ್ವತೋಮುಖ ಕಲ್ಯಾಣವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ. ಬಹುಮುಖ್ಯವಾಗಿ ದೇಶದ ಶೇ 85ರಷ್ಟು ಸಣ್ಣ ಮತ್ತು ಮಧ್ಯಮ ಕೃಷಿಕರ ಪಾಲಿಗೆ ಕೃಷಿ ಕಾಯ್ದೆಗಳು ವರದಾಯಕವಾಗಲಿವೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಭಿಪ್ರಾಯಪಟ್ಟಿದೆ.
ಸದ್ಯ ಜಾರಿಯಲ್ಲಿರುವ ಎಪಿಎಂಸಿ ಕೇಂದ್ರಿತ ಪದ್ಧತಿಯು ರೈತರನ್ನು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡುವುದರಿಂದ ಕಟ್ಟಿಹಾಕಿದೆ. ಎಪಿಎಂಸಿಗಳಲ್ಲಿ ಜಾರಿಯಲ್ಲಿರುವ ಕೆಲವು ಅಸಮರ್ಥ ನಿಯಮಗಳು ಮಧ್ಯಮ, ಸಣ್ಣ ಪ್ರಮಾಣದ ರೈತರಿಗೆ ಪೂರಕವಾಗಿಲ್ಲ. ಹೀಗಾಗಿ, ಕೃಷಿ ಮಾರುಕಟ್ಟೆಯ ಸ್ವಾತಂತ್ರ್ಯಕ್ಕಾಗಿ ಕೃಷಿ ಕಾಯ್ದೆಗಳ ಜಾರಿ ಅವಶ್ಯಕ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ.
ಸದ್ಯ ಜಾರಿಯಲ್ಲಿರುವ ಬೆಳೆಗಳ ಉತ್ಪಾದನೆ, ಸಂಗ್ರಹ, ರವಾನೆ, ವಿತರಣೆಗಳ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದನ್ನು ಆರ್ಥಿಕ ಸಮೀಕ್ಷೆ ಬಹುವಾಗಿ ಸಮರ್ಥಿಸಿಕೊಂಡಿದೆ.
ಇವನ್ನೂ ಓದಿ
Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!
Budget 2021 | ದೇಶದ ಮೊದಲ ಬಜೆಟ್ಗಿದ್ದ ಆದಾಯ ನಿರೀಕ್ಷೆ ₹ 171 ಕೋಟಿ
Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ
Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು
Budget 2021 | ಈ ಬಾರಿಯ ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳೇನು?
Budget 2021 Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು