ಲಾಯರ್ ಜಗದೀಶ್, ಕೆಂಪೇಗೌಡ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಪೊಲೀಸ್ ಮೇಲೆ ರೇಗಿದರು!
ಲಾಯರ್ ಜಗದೀಶ್ ಒಳಗೆ ಹೋಗುವಾಗ ಅದರೆ ಸಭಾಂಗಣ ಪ್ರವೇಶಿಸುವ ಮೊದಲು ಯಾರೋ ಒಬ್ಬರು ಅವರ ಪರವಾಗಿ ಮಾತಾಡುತ್ತಾ ಪೊಲೀಸ್ಗೆ ಏನೋ ಹೇಳಲು ಪ್ರಯತ್ನಿಸುತ್ತಾರೆ ಅಂತ ಕಾಣುತ್ತೆ. ಆಗ ಜಗದೀಶ್ ಹಿಂದಕ್ಕೆ ತಿರುಗಿ ಉಗೀರಿ ಅವನ ಮುಖಕ್ಕೆ ಒಂದಿಷ್ಟು ಅನ್ನುತ್ತಾರೆ. ಪೊಲೀಸ್ ತನ್ನನ್ನು ಅಂಡರ್ ಎಸ್ಟಿಮೇಟ್ ಮಾಡಿದರು ಎಂಬ ಕೋಪ ಅವರಲ್ಲಿದ್ದಿರಬೇಕು, ಅದರೆ ಪೊಲೀಸ್ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರು, ವಿಷಯ ಅಷ್ಟೇ.
ಬೆಂಗಳೂರು, ಜೂನ್ 2: ಲಾಯರ್ ಜಗದೀಶ್ ಇರುವಲ್ಲಿ ರಗಳೆ ಇರಲೇಬೇಕು ಮಾರಾಯ್ರೇ. ಅದನ್ನು ಕನ್ನಡಿಗರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ (Bigg Boss Kannada reality show) ನೋಡಿದ್ದಾರೆ. ಇವತ್ತು ನಗರದಲ್ಲಿ ಕೆಂಪೇಗೌಡ ಜಯಂತಿ ಅಚರಣೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೂರ್ವಭಾವಿ ಸಭೆಯೊಂದನ್ನು ನಡೆಸಿದರು. ಪ್ರಾಯಶಃ ಕೊಂಚ ತಡವಾಗಿ ಬಂದ ಜಗದೀಶ್ ರನ್ನು ಸಭಾಂಗಣದ ಮುಂಭಾಗದಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತಡೆದು, ಅಹ್ವಾನಿತರ ಲಿಸ್ಟ್ನಲ್ಲಿ ನಿಮ್ಮ ಹೆಸರಿಲ್ಲ, ಒಳಗೆ ಬಿಡಲ್ಲ ಎಂದಿದ್ದಾರೆ. ಅಷ್ಟು ಸಾಕಿತ್ತು ಲಾಯರ್ ಸಾಹೇಬರಿಗೆ ಪೊಲೀಸ್ ಮೇಲೆ ಕೂಗಾಡಲು! ಅಷ್ಟರಲ್ಲಿ ಶಿವಕುಮಾರ್ ಅಪ್ತ ಸಹಾಯಕರು ಅಲ್ಲಿಗೆ ಬಂದು ಜಗದೀಶ್ ರನ್ನು ಒಳಗೆ ಕರೆದುಕೊಡು ಹೋಗುತ್ತಾರೆ.
ಇದನ್ನೂ ಓದಿ: ‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
