ಕಾರನ್ನು ಸಂಪೂರ್ಣವಾಗಿ ಆರ್ಸಿಬಿಮಯಗೊಳಿಸಿ ನೆಚ್ಚಿನ ತಂಡಕ್ಕೆ ಒಂದು ಚಿಕ್ಕ ಟ್ರಬ್ಯೂಟ್ ಎಂದು ಕಾರಿನ ಒಡೆಯ
ನಾಳೆ ಅಹ್ಮದಾಬಾದ್ನಲ್ಲಿ ನಡೆಯುವ 18ನೇ ಆವೃತಿ ಐಪಿಎಲ್ ಫೈನಲ್ ಪಂದ್ಯದ ಫಲಿತಾಂಶ ಏನೇ ಆದರೂ ಆರ್ಸಿಬಿ ತಂಡದ ಮೇಲಿರುವ ಪ್ರೀತಿ ಕಡಿಮೆಯಾಗದು, ಅರ್ಸಿಬಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ ಎಂದು ಕಾರಿನ ಓನರ್ ಹೇಳುತ್ತಾರೆ. ಅದರೆ ಇದು ಐಪಿಎಲ್ 18 ನೇ ಸೀಸನ್ ಆಗಿರುವ ಜೊತೆಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ ಕೂಡ 18 ಅಗಿರುವುದರಿಂದ ‘ಈ ಸಲ ಕಪ್ ನಮ್ದೇ’ ಎಂದು ಕಾರಲ್ಲಿದ್ದವರೆಲ್ಲ ಹೇಳುತ್ತಾರೆ.
ಮೈಸೂರು, ಜೂನ್ 2: ಈ ಕಾರಿನ ಒಡೆಯನಿಗೆ ಕ್ರಿಕೆಟ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಮೇಲಿರುವ ಪ್ರೀತಿ-ವಿಶ್ವಾಸ-ಅಭಿಮಾನ ಎಣಿಕೆಗೆ ನಿಲುಕದಂಥದ್ದು. ಕಾರಿನ ಅಕ್ಕ-ಪಕ್ಕ, ಹಿಂದೆ-ಮುಂದೆ ಮತ್ತು ರೂಫಿನ ಮೇಲೆ ಅರ್ಸಿಬಿ ಮಹಿಳಾ ಮತ್ತು ಪುರುಷ ತಂಡದ ಸದಸ್ಯರ ಪೋಸ್ಟರ್ ಗಳನ್ನು ಮೆತ್ತಿಸಿದ್ದಾರೆ ಎಂಬ ಕಾರಣಕ್ಕೆ ಅವರ ಅಭಿಮಾನದ ಬಗ್ಗೆ ಮಾತಾಡುತ್ತಿಲ್ಲ. ಅವರು ಆಡುವ ಪ್ರತಿ ಮಾತಿನಿಂದ ವಿರಾಟ್ ಕೊಹ್ಲಿ ತಂಡದ ಮೇಲಿರುವ ಪ್ರೀತಿ ಮನದಟ್ಟಾಗುತ್ತದೆ. ಕಾರನ್ನು ಅರ್ಸಿಬಿಮಯಗೊಳಿಸಬೇಕೆಂಬ ಯೋಚನೆ ಕೇವಲ ಎರಡು ದಿನಗಳ ಹಿಂದಷ್ಟೇ ಅವರಿಗೆ ಬಂದಿದ್ದು, ನಗರದ ಕಾರ್ಮೇಡ್ ಹೆಸರಿನ ಸಂಸ್ಥೆ ಅವರ ಸ್ನೇಹಿತರಿಗೆ ಸೇರಿದ್ದಂತೆ, ಸಂಸ್ಥೆಯವರು ಹಗಲು ರಾತ್ರಿ ಕೆಲಸ ಮಾಡಿ ಕೇವಲ ಎರಡು ದಿನಗಳಲ್ಲಿ ಕಾರಿಗೆ ಆರ್ಸಿಬಿ ರೂಪ ನೀಡಿದ್ದಾರೆ. ವ್ಹಾವ್!!
ಇದನ್ನೂ ಓದಿ: ಮೈಸೂರಲ್ಲೂ ಆರ್ಸಿಬಿ ತಂಡ ಅಭಿಮಾನಿಗಳ ಹರ್ಷೋದ್ಗಾರ, ತಿಂಡಿ ತಿನ್ನುತ್ತ ಕುಣಿದ ಯುವತಿಯರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ