AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಲ್ಲೂ ಆರ್​ಸಿಬಿ ತಂಡ ಅಭಿಮಾನಿಗಳ ಹರ್ಷೋದ್ಗಾರ, ತಿಂಡಿ ತಿನ್ನುತ್ತ ಕುಣಿದ ಯುವತಿಯರು

ಮೈಸೂರಲ್ಲೂ ಆರ್​ಸಿಬಿ ತಂಡ ಅಭಿಮಾನಿಗಳ ಹರ್ಷೋದ್ಗಾರ, ತಿಂಡಿ ತಿನ್ನುತ್ತ ಕುಣಿದ ಯುವತಿಯರು

ಅರುಣ್​ ಕುಮಾರ್​ ಬೆಳ್ಳಿ
|

Updated on:May 30, 2025 | 8:49 PM

Share

ಪಂಜಾಬ್ ಕಿಂಗ್ಸ್​ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಅರ್​ಸಿಬಿ ತಂಡದ ಬೌಲರ್​​ಗಳು ಸ್ಥಳೀಯ ತಂಡದ ಬ್ಯಾಟರ್​ಗಳನ್ನು ಕಟ್ಟಿಹಾಕುತ್ತ ಡಗ್​ಔಟ್ ದಾರಿ ತೋರಿಸಿದರು. ಬೆಂಗಳೂರು ಟೀಮಿನ ಜೋಶ್ ಹೇಜೆಲ್ವುಡ್, ಯಶ್ ದಯಾಳ್ ಮತ್ತು ಸುಯಾಶ್ ಶರ್ಮ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 3, 2 ಮತ್ತು ಮೂರು ವಿಕೆಟ್​​ಗಳನ್ನು ಪಡೆದರು. 17 ರನ್ ನೀಡಿ 3 ವಿಕೆಟ್ ಪಡೆದ ಸುಯಾಶ್ ಪಂದ್ಯದ ವ್ಯಕ್ತಿ ಎನಿಸಿಕೊಂಡರು.

ಮೈಸೂರು, ಮೇ 30: ಗುರುವಾರ ಸಾಯಂಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಕರ್ನಾಟಕದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರತಿನಿಧಿಸುವ ಆರ್​ಬಿಗೆ ಅಪಾರ ಪ್ರಮಾಣದಲ್ಲಿ ಮಹಿಳಾ ಅಭಿಮಾನಿಗಳೂ ಇದ್ದಾರೆ. ಮೈಸೂರಿನ ಹೋಟೆಲೊಂದರಲ್ಲಿ ತಿಂಡಿ ತಿನ್ನುತ್ತಾ, ಕಾಫಿ ಹೀರುತ್ತಾ ಇಲ್ಲವೇ ಊಟ ಮಾಡುತ್ತ ಕುಳಿತಿದ್ದ ಕ್ರಿಕೆಟ್ ಪ್ರೇಮಿ ಯುವತಿಯರು ಟಿವಿ9 ಕನ್ನಡ ವಾಹಿನಿಯು ಅರ್​​ಸಿಬಿ ತಂಡ ಪಂಜಾಬನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಸುದ್ದಿಯನ್ನು ಬ್ರೇಕ್ ಮಾಡಿದ್ದು ಅವರ ಮುಂದಿದ್ದ ದೈತ್ಯ ಸ್ಕ್ರೀನ್ ಮೇಲೆ ಫ್ಲ್ಯಾಶ್ ಆಗುತ್ತಿದ್ದಂತೆಯೇ ಆರ್​ಸಿಬಿ ಆರ್ಸಿಬಿ ಎನ್ನುತ್ತಾ ಕುಣಿದಾಡತೊಡಗಿದರು.

ಇದನ್ನೂ ಓದಿ:  IPL 2025: 6,6,6,6,6…! ರಾಯಲ್ಸ್ ವಿರುದ್ಧ ಅಬ್ಬರಿಸಿದ ಫಿಲ್ ಸಾಲ್ಟ್; ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 30, 2025 12:13 PM