ಆರ್ಸಿಬಿ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಮೈಸೂರಲ್ಲಿ ಅಭಿಮಾನಿಗಳಿಂದ ಹೋಮ, ಹವನ
ದೇವಸ್ಥಾನದ ಅರ್ಚಕರೂ ಸಹ ಕ್ರಿಕೆಟ್ ಪ್ರೇಮಿಗಳು ಮತ್ತು 35 ವರ್ಷಗಳ ಹಿಂದೆ ಕ್ರಿಕೆಟ್ ಆಡಿದವರು. ಅರ್ಸಿಬಿ ಟೀಮು ಗೆಲ್ಲಲಿ ಅಂತ ಇವತ್ತು ದೇವಸ್ಥಾನದಲ್ಲಿ ವಿಜಯದುರ್ಗ ಹೋಮ ಮಾಡಿಸಲಾಗಿದೆ, ಹಾಗೆಯೇ ಅಮೃತೇಶ್ವರನಿಗೆ ರುದ್ರಾಭಿಷೇಕ ಮಾಡಿಸುವ ಜೊತೆಗೆ ಸತ್ಯನಾರಾಯಣ ಪೂಜೆಯನ್ನೂ ನೆರವೇರಿಸಲಾಗಿದೆ ಎಂದು ಹೇಳಿದ ಅರ್ಚಕರು, ಕಳೆದ 18 ವರ್ಷಗಳಲ್ಲಿ ಆರ್ಸಿಬಿಗೆ ಸಾಧ್ಯವಾಗದ್ದನ್ನು ಈ ಬಾರಿ ಸಾಧಿಸಲಿ ಅನ್ನೋದು ಎಲ್ಲರ ಸಂಕಲ್ಪವಾಗಿದೆ ಎಂದರು.
ಮೈಸೂರು, ಜೂನ್ 2: ಕ್ರಿಕೆಟ್ ಅನ್ನು ಅಮೋಘ ಅನಿಶ್ಚಿತತೆಗಳ ಅದ್ಭುತ ಆಟ (game of glorious uncertainties) ಎಂದು ಬಣ್ಣಿಸುತ್ತಾರೆ. ಟಿ20 ಅವೃತಿಯಂತೂ ಮತ್ತಷ್ಟು ಚಂಚಲ. ಕ್ವಾಲಿಫೈಯರ್ 1 ರಲ್ಲಿ ಆರ್ಸಿಬಿಗೆ ಸುಲಭವಾಗಿ ಸೋತು ಕ್ವಾಲಿಫೈಯರ್ 2 ರಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಪಂದ್ಯವೊಂದರಲ್ಲಿ ಸೋಲಿಸಿದ ಪಂಜಾಬ್ ಕಿಂಗ್ಸ್ ಎಲೆವೆನ್ ತಂಡ ಫೈನಲ್ ತಲುಪೀತು ಅಂತ ಯಾರಾದರೂ ಅಂದುಕೊಂಡಿದ್ದರೇ? ವೆಲ್, ನಾಲ್ಕನೇ ಬಾರಿ ಫೈನಲ್ ತಲಪಿರುವ ಬೆಂಗಳೂರು ತಂಡವನ್ನು ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಪಂಜಾಬ್ ನಾಳೆ ಅಹ್ಮದಾಬಾದ್ನಲ್ಲಿ ಎದುರಿಸಲಿದೆ. ಆರ್ಸಿಬಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಎಂದು ಮೈಸೂರು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಅವರ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಮಾಡಿಸಿದರು.
ಇದನ್ನೂ ಓದಿ: ಆರ್ಸಿಬಿಗೆ ಅಂಕಿಅಂಶಗಳ ಬೆಂಬಲ; ಕ್ವಾಲಿಫೈಯರ್-1 ಗೆದ್ದ ತಂಡ ಎಷ್ಟು ಬಾರಿ ಚಾಂಪಿಯನ್ ಆಗಿದೆ ಗೊತ್ತಾ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ