VIDEO: ಅದ್ಭುತ ಡೈವಿಂಗ್ ಕ್ಯಾಚ್… ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
England Lions vs India A: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡದ ಪರ ಕರುಣ್ ನಾಯರ್ (204), ಸರ್ಫರಾಝ್ ಖಾನ್ (92) ಹಾಗೂ ಧ್ರುವ್ ಜುರೇಲ್ (94) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಭಾರತ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 557 ರನ್ ಕಲೆಹಾಕಿತು.
ಟೀಮ್ ಇಂಡಿಯಾದ ಯುವ ಆಟಗಾರ ಸರ್ಫರಾಝ್ ಖಾನ್ (Sarfaraz Khan) ಅತ್ಯದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಕ್ಯಾಂಟ್ಬೆರ್ರಿಯಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ಟೆಸ್ಟ್ ಪಂದ್ಯದ 3ನೇ ದಿನದಾಟದಂದು ಸರ್ಫರಾಝ್ ಕ್ಷೇತ್ರರಕ್ಷಣೆಯಲ್ಲಿ ಕಮಾಲ್ ಮಾಡಿದ್ದು, ಈ ಮೂಲಕ ತಮ್ಮ ಫಿಟ್ನೆಸ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದವರಿಗೆ ಉತ್ತರ ನೀಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡದ ಪರ ಕರುಣ್ ನಾಯರ್ (204), ಸರ್ಫರಾಝ್ ಖಾನ್ (92) ಹಾಗೂ ಧ್ರುವ್ ಜುರೇಲ್ (94) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಭಾರತ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 557 ರನ್ ಕಲೆಹಾಕಿತು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡದ ಪರ ಆರಂಭಿಕ ಆಟಗಾರ ಟಾಮ್ ಹೈನ್ಸ್ ಹಾಗೂ ಮ್ಯಾಕ್ಸ್ ಹೋಲ್ಡನ್ ಶತಕ ಸಿಡಿಸಿದರು. ಅತ್ತ ಶತಕದ ಬಳಿಕ ದ್ವಿಶತಕದತ್ತ ದಾಪುಗಾಲಿಟ್ಟಿದ್ದ ಹೈನ್ಸ್ರನ್ನು ಔಟ್ ಮಾಡುವಲ್ಲಿ ಕೊನೆಗೂ ಸರ್ಫರಾಝ್ ಯಶಸ್ವಿಯಾದರು.
ಇಂಗ್ಲೆಂಡ್ ಲಯನ್ಸ್ ಇನಿಂಗ್ಸ್ನ 100ನೇ ಓವರ್ ಎಸೆದ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಡ್ಜ್ ಶಾಟ್ ಬಾರಿಸಲು ಹೈನ್ಸ್ ಯತ್ನಿಸಿದ್ದರು. ಆದರೆ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಸರ್ಫರಾಝ್ ಖಾನ್ ಕ್ಷಣಾರ್ಧದಲ್ಲಿ ಜಿಗಿಯುವ ಮೂಲಕ ಚೆಂಡನ್ನು ಹಿಡಿದರು. ಇದೀಗ ಸರ್ಫರಾಝ್ ಖಾನ್ ಅವರ ಅತ್ಯದ್ಭುತ ಡೈವಿಂಗ್ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದ ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 527 ರನ್ ಕಲೆಹಾಕಿದ್ದು, ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.