ಅಮೇಜಾನ್ ಡೆಲಿವರಿ ಬಾಯ್ ಹೊತ್ತು ತರುವ ಸಾಮಾನಗಳನ್ನೂ ಬಿಡುತ್ತಿಲ್ಲ ಬೆಂಗಳೂರಿನ ಕಳ್ಳರು!
ಕಳ್ಳರು ತಮ್ಮ ಕಸುಬಿನಲ್ಲಿ ನುರಿತವರು ಅನ್ನೋದು ಅವರು ಕಳ್ಳತನ ಮಾಡುವ ವಿಧಾನದಿಂದ ಗೊತ್ತಾಗುತ್ತದೆ. ಅವರು ಕೃತ್ಯವೆಸಗಲು ಅವಸರಿಸುವುದಿಲ್ಲ, ಫೋನಲ್ಲಿ ಮಾತಾಡುತ್ತಿರುವ ವ್ಯಕ್ತಿಯೊಬ್ಬ ದೂರ ಸರಿಯುವುದನ್ನು ತಾಳ್ಮೆಯಿಂದ ಕಾಯುತ್ತಾರೆ, ಬೇರೆಯವರು ತಮ್ಮನ್ನು ಗಮನಿಸುತ್ತಿಲ್ಲ ಅನ್ನೋದನ್ನು ಖಚಿತಪಡಿಸಿಕೊಳ್ಳುತ್ತಾರೆ, ನಂತರ ಎರಡು ಬ್ಯಾಗ್ ಗಳನ್ನು ತಮ್ಮ ಗಾಡಿ ಮೇಲೆ ಹೊತ್ತು ನಿಧಾನಕ್ಕೆ ತಾವು ಬಂದ ದಾರಿಯ ಕಡೆ ತೆರಳುತ್ತಾರೆ.
ಬೆಂಗಳೂರು, ಜೂನ್ 2: ಬೆಂಗಳೂರಲ್ಲಿ ಎಂತೆಂಥ ಕಳ್ಳರಿದ್ದಾರೆ ಅಂತ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಇಲ್ಲಿಯೂ ಕಳುವಿಗೆ ಪಲ್ಸರ್ ದ್ವಿಚಕ್ರ ವಾಹನ ಬಳಕೆಯಾಗಿರೋದು ವಿಶೇಷ. ಅಮೇಜಾನ್ ಡೆಲಿವರಿ ಬಾಯ್ಯೊಬ್ಬ ಸ್ಕೂಟರ್ ಒಂದರಲ್ಲಿ ಸಾಮಾನು ಡೆಲಿವರಿ ಮಾಡಲು ನಗರದ ಮೈಕೋ ಲೇಔಟ್ ನಲ್ಲಿರುವ (Mico layout) ರಂಕಾ ಕಾಲೋನಿಯ ಎಸ್ಎನ್ಎನ್ ರಾಜ್ ಅಪಾರ್ಟ್ಮೆಂಟ್ ಬಳಿ ಬಂದಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ಕಳ್ಳರು, ಡೆಲಿವರಿ ಬಾಯ್ ಗ್ರಾಹಕರೊಬ್ಬರ ಸಾಮಾನು ಡೆಲಿವರಿ ಮಾಡಲು ಹೋದಾಗ ಸ್ಕೂಟರ್ ಮುಂಭಾಗದಲ್ಲಿದ್ದ ಉಳಿದ ಸಾಮಾನುಗಳನ್ನು ಅನಾಮತ್ತಾಗಿ ಎತ್ತಿಕೊಂಡು ಪರಾರಿಯಾಗುತ್ತಾರೆ. ಅವರ ಕೃತ್ಯ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಉದ್ಯಮಿ ಮನೆಯಲ್ಲಿ ನೇಪಾಳ ಮೂಲದ ದಂಪತಿ ಸೇರಿ ಐವರಿಂದ ಕಳ್ಳತನ: ಕಾರಿನಲ್ಲಿ ಪರಾರಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
