ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು 11 ಲಕ್ಷ ರೂ. ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಕಾರಿನಲ್ಲಿ ದೊಡ್ಡ ಮೊತ್ತದ ಹಣ, ಆಭರಣ ಇಟ್ಟು ಹೋಗುವವರು ಗಮನಿಸಲೇಬೇಕಾದ ವಿಚಾರವಿದು. ಕಾರಿನ ಗಾಜು ಒಡೆದು 11.5 ಲಕ್ಷ ರೂ. ನಗದು ಕಳವು ಮಾಡಿದ ವಿದ್ಯಮಾನ ನೆಲಮಂಗಲದಲ್ಲಿ ನಡೆದಿದೆ. ಸದ್ಯ ಕಳವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಖತರ್ನಾಕ್ ಕಳ್ಳರು ಕಾರಿನಿಂದ ಹಣ ಎಗರಿಸಿದ ಸಿಸಿಟಿವಿ ವಿಡಿಯೋ ಇಲ್ಲಿದೆ.
ನೆಲಮಂಗಲ, ಜೂನ್ 1: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ದಾಬಸ್ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದ ಅತೀಕ್ ರೆಹಮಾನ್ ಎಂಬವರಿಗೆ ಸೇರಿದ ಕಾರಿನಿಂದ ಹಣ ಕಳವು ಮಾಡಲಾಗಿದೆ. ದಾಬಸ್ಪೇಟೆಟೆಯಿಂದ ಹಣ ತೆಗೆದುಕೊಂಡು ಬಂದಿದ್ದ ಅತೀಕ್, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಹೋಗಿದ್ದರು. ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ವರದಿ, ವಿಡಿಯೋ: ಮಂಜುನಾಥ್, ಟಿವಿ9
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

