ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವಣ್ಣ ಗರಂ
ಕಮಲ್ ಹಾಸನ್ ಅವರ ಮಾತಿಗೆ ಶಿವಣ್ಣ ಚಪ್ಪಾಳೆ ಹೊಡೆದರು ಎಂಬ ರೀತಿ ಕೆಲವು ಕಡೆಗಳಲ್ಲಿ ತೋರಿಸಲಾಗುತ್ತಿದೆ. ಅದನ್ನು ಶಿವರಾಜ್ಕುಮಾರ್ ಖಂಡಿಸಿದ್ದಾರೆ. ‘ಅಂಥ ಟ್ರಿಕ್ಸ್ ನನ್ನ ಎದುರು ತೋರಿಸಬೇಡಿ. ನಾನು ಕೂಡ ಒಬ್ಬ ನಟ. ಅದನ್ನೆಲ್ಲ ನಾನು ಪತ್ತೆಹಚ್ಚಬಲ್ಲೆ’ ಎಂದು ಶಿವರಾಜ್ಕುಮಾರ್ ಅವರು ಮಾಧ್ಯಮಗಳ ಎದುರು ಗರಂ ಆಗಿದ್ದಾರೆ.
ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅಂದು ಅವರು ಹೇಳಿಕೆ ನೀಡಿದ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ (Shivarajkumar) ಕೂಡ ಹಾಜರಿದ್ದರು. ಆ ಬಗ್ಗೆ ಈಗ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ (Kamal Haasan) ಮಾತಿಗೆ ಶಿವಣ್ಣ ಚಪ್ಪಾಳೆ ಹೊಡೆದರು ಎಂಬ ರೀತಿಯಲ್ಲಿ ಕೆಲವು ಕಡೆಗಳಲ್ಲಿ ತೋರಿಸಲಾಗುತ್ತಿದೆ. ಅದನ್ನು ಶಿವರಾಜ್ಕುಮಾರ್ ಖಂಡಿಸಿದ್ದಾರೆ. ‘ಅಂಥ ಟ್ರಿಕ್ಸ್ ನನ್ನ ಹತ್ರ ತೋರಿಸಬೇಡಿ. ನಾನು ಕೂಡ ನಟ. ಅದನ್ನು ನಾನು ಪತ್ತೆ ಮಾಡಬಲ್ಲೆ’ ಎಂದು ಶಿವರಾಜ್ಕುಮಾರ್ ಗರಂ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.