ಕಮಲ್ ಹಾಸನ್ ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಭಾಷೆಗೆ ಅವಮಾನ ಮಾಡಬಾರದಿತ್ತು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದಾಗ ವೇದಿಕೆ ಮೇಲಿದ್ದ ಶಿವರಾಜಕುಮಾರ್ ಮತ್ತು ಚಿತ್ರನಟಿ ರಮ್ಯಾ ಕಮಲ್ ಹೇಳಿಕೆಯನ್ನು ಖಂಡಿಸದೆ, ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿವೃತ್ತ ನ್ಯಾಯಮೂರ್ತಿಯವರನ್ನು ಕೇಳಿದಾಗ ಅದು ಅವರವರ ವೈಯಕ್ತಿಕ ವಿಷಯವಾದರೂ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದರು.
ದಾವಣಗೆರೆ, ಮೇ 31: ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ (Rtd Justice N Santosh Hegde) ಅವರು ಬಹಳಷ್ಟು ಕನ್ನಡಿಗರಿಗೆ ಗೊತ್ತಿರದ ವಿಷಯವೊಂದನ್ನು ಹೇಳಿದರು. ಕನ್ನಡ ಭಾಷೆಗೆ ಅವಮಾನ ಮಾಡಿರುವ ಕಮಲ್ ಹಾಸನ್ ಕರ್ನಾಟಕದಲ್ಲಿ ಹುಟ್ಟಿದ್ದು ಎಂದು ಸಂತೋಷ್ ಹೆಗ್ಡೆ ಹೇಳುತ್ತಾರೆ. ಕನ್ನಡ ನಾಡಲ್ಲಿ ಹುಟ್ಟಿದ ಕಮಲ್ ಹಾಸನ್ ತಮಿಳುನಾಡುಗೆ ಹೋಗಿ ಕನ್ನಡ ತಮಿಳುನಿಂದ ಹುಟ್ಟಿದ್ದು ಅಂತ ಹೇಳಿರುವುದು ವಿಷಾದನೀಯ, ಅವರು ತಮಿಳು ಚಿತ್ರರಂಗದ ಮೂಲಕ ಎಷ್ಟೇ ಜನಪ್ರಿಯರಾದರೂ, ಎಷ್ಟೇ ದೊಡ್ಡನಟನಾಗಿ ಬೆಳೆದರೂ ಹುಟ್ಟಿದ ನಾಡನ್ನು ಮರೆಯಬಾರದಿತ್ತು, ಅವರು ಹೇಳಿದ್ದು ತಪ್ಪು ಅವರ ಮಾತನ್ನು ಖಂಡಿಸುತ್ತೇನೆ ಎಂದು ಸಂತೋಷ ಹೆಗ್ಡೆ ಹೇಳಿದರು.
ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾವೇನಾದರೂ ಬಿಡುಗಡೆ ಮಾಡಿದರೆ ಥೇಟರ್ಗಳಿಗೆ ಬೆಂಕಿ ಹಾಕ್ತೀವಿ: ಟಿಎ ನಾರಾಯಣಗೌಡ, ಕರವೇ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ