ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಣ ಮಾಡಿದ ಸ್ಥಳೀಯರು!
ತೆಲಂಗಾಣದ ಸುಲತನಾಬಾದ್‌ನಲ್ಲಿ ವಿವಾಹೇತರ ಸಂಬಂಧದಲ್ಲಿ ಸಿಕ್ಕಿಬಿದ್ದ ದಂಪತಿಯನ್ನು ಸ್ಥಳೀಯರು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸುವ ಮೊದಲು ಅವರಿಗೆ 'ಶುದ್ಧೀಕರಣ ವಿಧಿ' ಮಾಡಿದ್ದಾರೆ. ಅಶೋಕ್ ನಗರದ ನಿವಾಸಿ ಮೌನಿಕಾ, ಭೂಪಾಲಪಲ್ಲಿ ಜಿಲ್ಲೆಯ ಯುವಕ ಸ್ವಾಮಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸಂಪರ್ಕ ಸಾಧಿಸಿದ ನಂತರ ಆತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಗಿ ವರದಿಯಾಗಿದೆ. ಆನ್‌ಲೈನ್ ಪರಿಚಯವು ಶೀಘ್ರದಲ್ಲೇ ವಿವಾಹೇತರ ಸಂಬಂಧವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಲಾಗಿದೆ.
ಹೈದರಾಬಾದ್, ಮೇ 31: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಪಟ್ಟಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಅಕ್ರಮ ಸಂಬಂಧದ (Extra Marital Affair) ಆರೋಪದ ಮೇಲೆ ಸ್ಥಳೀಯರು ಮಹಿಳೆ ಮತ್ತು ಯುವಕನನ್ನು ಕಟ್ಟಿಹಾಕಿ ಸಾರ್ವಜನಿಕ “ಶುದ್ಧೀಕರಣ ವಿಧಿ”ಗೆ ಒಳಪಡಿಸಿದ್ದಾರೆ. ತೆಲಂಗಾಣದ ಅಶೋಕ್ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಅಶೋಕ್ ನಗರದ ನಿವಾಸಿ ಮೌನಿಕಾ, ಭೂಪಾಲಪಲ್ಲಿ ಜಿಲ್ಲೆಯ ಯುವಕ ಸ್ವಾಮಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸಂಪರ್ಕ ಬೆಳೆಸಿದ್ದರು. ನಂತರ ಆಕೆ ಆತನೊಂದಿಗೆ ಸಂಬಂಧ ಬೆಳೆಸಿದ್ದಳು. ಸ್ವಾಮಿ ಕಳೆದ 3 ದಿನಗಳಿಂದ ಮೌನಿಕಾ ಅವರ ನಿವಾಸದಲ್ಲಿ ತಂಗಿದ್ದರು. ಇದು ಸ್ಥಳೀಯ ನಿವಾಸಿಗಳ ಕೋಪಕ್ಕೆ ಕಾರಣವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos