ಕ್ರಿಮಿನಲ್ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಮಂಗಳೂರಿನಲ್ಲಿ ಹೊಸದಾಗಿ ನೇಮಕಗೊಂಡ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕೊಲೆಯಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಮತ್ತು ಅಂತಹ ಆರೋಪಿ ವ್ಯಕ್ತಿಗಳನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವವರಿಗೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ಕೊಲೆ ಅಥವಾ ಅಪರಾಧ ಮಾಡಿದ ಆರೋಪಿಗೆ ಆಶ್ರಯ, ಆಹಾರ, ತಪ್ಪಿಸಿಕೊಳ್ಳಲು ವಾಹನ, ಹಣ ಅಥವಾ ಸಂವಹನ ನಡೆಸಲು ಫೋನ್ ನೀಡುವ ಮೂಲಕ ಸಹಾಯ ಮಾಡುವವರನ್ನು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಆರೋಪಿ ಎಂದು ಪರಿಗಣಿಸಲಾಗುತ್ತದೆ ಎಂದು ಸುಧೀರ್ ರೆಡ್ಡಿ ಹೇಳಿದ್ದಾರೆ.
ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ, ಕೊಲೆ ಪ್ರಕರಣಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ (Sudheer Kumar Reddy) ಖಡಕ್ ವಾರ್ನಿಂಗ್ ನೀಡಿದ್ದಾರೆ. ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಆರೋಪಿಗಳಿಗೆ ಮತ್ತು ಆರೋಪಿಗಳಿಗೆ ಸಹಕಾರ ಮಾಡುವ ಎಲ್ಲರಿಗೂ ಇದು ಎಚ್ಚರಿಕೆ. ಎಲ್ಲಾ ದೊಡ್ಡವರಿಗೆ, ಆರೋಪಿಗಳ ಮನೆಯಲ್ಲಿರುವವರು, ಗೆಳೆಯರು, ಸಂಬಂಧಿಕರಿಗೆ, ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಪರಾಧ ಮಾಡಿದ ಆರೋಪಿ ನಿಮ್ಮ ಮನೆಯಲ್ಲಿದ್ದರೂ ಅವರಿಗೆ ಆಶ್ರಯ, ಕಾರು, ದುಡ್ಡು, ಫೋನ್ ಕೊಡೋದು ಅಪರಾಧ. ಯಾವ ಊರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ, ಆದರೆ ನಾವು ಮಾತ್ರ ಅವನನ್ನು ಆರೋಪಿ ಅಂತಾನೆ ಹೇಳುತ್ತೇವೆ. ನಮ್ಮ ಬಿಎನ್ ಎಸ್ ಅಡಿಯಲ್ಲಿ ಅದು ಕೂಡ ಒಂದು ಅಪರಾಧ ಎಂದು ಸುಧೀರ್ ರೆಡ್ಡಿ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
