ಕಮಲ್ ಹಾಸನ್ ಸಿನಿಮಾವೇನಾದರೂ ಬಿಡುಗಡೆ ಮಾಡಿದರೆ ಥೇಟರ್ಗಳಿಗೆ ಬೆಂಕಿ ಹಾಕ್ತೀವಿ: ಟಿಎ ನಾರಾಯಣಗೌಡ, ಕರವೇ
ಯಾರೆಷ್ಟೇ ವಿರೋಧ ಮಾಡಿದರೂ ತನ್ನ ಅಭಿಮಾನಿಗಳು ಸಿನಿಮಾ ನೋಡುತ್ತಾರೆ ಎಂದು ಕಮಲ್ ಹಾಸನ್ ಹೇಳಿದ್ದಾರೆ, ಅದರೆ ಈ ನಟನ ಬಗ್ಗೆ ಯಾರಿಗೆ ಎಷ್ಟೇ ಅಭಿಮಾನವಿರಲಿ, ಅವರ ಸಿನಿಮಾ ನೋಡಬಾರದು, ಸಿನಿಮಾವನ್ನೇದರೂ ವೀಕ್ಷಿಸಲು ಹೋದರೆ ಕಮಲ್ ಹಾಸನ್ನಂತೆ ಅವರು ಸಹ ಕನ್ನಡಕ್ಕೆ ಘೋರ ಅಪಮಾನವೆಗಿದಂತೆ ಎಂದು ಹೇಳಿದ ನಾರಾಯಣಗೌಡ ಕರ್ನಾಟಕ ತಮಿಳು ಸಂಘವೂ ಕನ್ನಡಿಗರ ಜತೆ ನಿಂತಿದೆ ಎಂದರು.
ಬೆಂಗಳೂರು, ಮೇ 30: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗೋದು ಸಾಧ್ಯವಿಲ್ಲ, ಕನ್ನಡ ಪರ ಹೋರಾಟ ಬೇರೆ, ವ್ಯಾಪಾರವೇ ಬೇರೆ ಅಂತ ಭಾವಿಸಿ ಯಾರಾದರೂ ಸಿನಮಾ ಬಿಡುಗಡೆ (film release) ಮಾಡಿದರೆ ಥೇಟರ್ಗಳಿಗೆ ಬೆಂಕಿ ಇಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಎಚ್ಚರಿಸಿದರು. ಸಿನಿಮಾ ಹಂಚಿಕೆದಾರರು ತಮಗೆ ನಷ್ಟವಾಗುತ್ತದೆ ಅಂದುಕೊಳ್ಳುತ್ತಿದ್ದರೆ ನಷ್ಟದ ಹಣವನ್ನು ನಿರ್ಮಾಪಕರಿಂದ ಇಲ್ಲವೇ ಕಮಲ್ ಹಾಸನ್ರಿಂದ ವಸೂಲಿ ಮಾಡಲಿ, ಹಂಚಿಕೆದಾರರಿಗೆ ಕನ್ನಡ ಮುಖ್ಯವಾದಾಗ ಮಾತ್ರ ವ್ಯಾಪಾರ ಮುಖ್ಯ ಆಗೋದು, ಹಾಗಲ್ಲ ಅಂತ ಅವರಿಗೆ ಅನ್ನಿಸುವುದಾದರೆ ತಮಿಳು ನಾಡಿಗೆ ಹೋಗಿ ವ್ಯಾಪಾರ ಮಾಡಿಕೊಳ್ಳಲಿ ಎಂದು ನಾರಾಯಣಗೌಡ ಹೇಳಿದರು.
ಇದನ್ನೂ ಓದಿ: ಜನ ನೀಡುವ ಕಾಸಿನಿಂದಲೇ ಕಮಲ್ ಹಾಸನ್ ಒಬ್ಬ ನಟನಾಗಿ ಬೆಳೆದಿದ್ದು: ವಿ ಸೋಮಣ್ಣ, ಕೇಂದ್ರ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

