ರಮ್ಯಾ ಕನ್ನಡ ಹೋರಾಟಗಾರರ ಬದಲು ಕಮಲ್ ಹಾಸನ್ಗೆ ಉಪದೇಶ ಮಾಡಲಿ: ಟಿಎ ನಾರಾಯಣಗೌಡ, ಕರವೇ
ಕರ್ನಾಟಕದದಲ್ಲಿ ಕನ್ನಡಕ್ಕಿಂತ ದೊಡ್ಡೋರು ಯಾರೂ ಇಲ್ಲ, ಕಮಲ್ ಹಾಸನ್ ಗೆ ಈಗಲೂ ಕಾಲ ಮಿಂಚಿಲ್ಲ, ಅವರ ಸಿನಿಮಾ ಬಿಡುಗಡೆ ಆಗುವ ದಿನಾಂಕದೊಳಗೆ ಕನ್ನಡಿಗರ ಕ್ಷಮೆ ಯಾಚಿಸಲಿ, ಅವರು ಮಾಡದ ತಪ್ಪಿಗೆ ಯಾರೂ ಕ್ಷಮೆ ಕೇಳುವಂತೆ ಹೇಳುತ್ತಿಲ್ಲ, ಅವರು ಮಾತಾಡಿದ್ದು ತಪ್ಪು ಅಂತ ಎಲ್ಲರಿಗೂ ಗೊತ್ತು, ಮೂರ್ಖ ಸಮರ್ಥನೆಗಳನ್ನು ಬಿಟ್ಟು ಕ್ಷಮೆ ಯಾಚಿಸಲಿ ಎಂದು ನಾರಾಯಣಗೌಡ ಹೇಳಿದರು.
ಬೆಂಗಳೂರು, ಮೇ 30: ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ (Kamal Hassan) ಆಡಿರುವ ಮಾತುಗಳನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ ಎನ್ನುತ್ತ ತಮಿಳು ನಟನ ಸಮರ್ಥನೆಗಿಳಿದಿರುವ ಚಿತ್ರನಟಿ ರಮ್ಯಾ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಮೂರ್ಖತನವೆಂದು ಹೇಳಿದರು. ತಮಿಳುನಾಡಿನಲ್ಲಿ ಒಬ್ಬ ಚಿಕ್ಕ ಕಲಾವಿದ ಸಹ ತನ್ನ ಭಾಷೆಯ ಬಗ್ಗೆ ಬಹಳ ಅಭಿಮಾನದಿಂದ ಮಾತಾಡುತ್ತಾನೆ, ಆದರೆ ಕನ್ನಡದ ನಟ ನಟಿಯರು ಬಾಷೆ-ಜಲ-ನೆಲದ ಪ್ರಶ್ನೆ ಬಂದಾಗಲೂ ಮಾತಾಡಲ್ಲ, ಹಾಗಾಗಿ ರಮ್ಯಾ ಉಪದೇಶ ಮಾಡೋದಿದ್ದರೆ ಕಮಲ್ ಹಾಸನ್ಗೆ ಮಾಡಲಿ, ಕನ್ನಡಿಗರಿಗೆ ಅವಶ್ಯಕತೆಯಿಲ್ಲ ಎನ್ನುತ್ತಾರೆ. ಈ ಸಂದರ್ಭದಲ್ಲಿ ಅವರು ಜಿಪಿ ರಾಜರತ್ನಂ ಅವರ ಪದ್ಯವೊಂದನ್ನು ಅವರು ವಾಚಿಸುತ್ತಾರೆ: ಆಜ್ಞೆ ಮಾಡೋ ಐಗೋಳೆಲ್ಲ ದೇವ್ರೇ ಅಗ್ಲಿ ಎಲ್ಲ, ಕನ್ನಡ ಸುದ್ದಿಗೇನಾದ್ರೂ ಬಂದ್ರೆ ಮಾನ ಉಳಿಸಾಕಿಲ್ಲ.
ಇದನ್ನೂ ಓದಿ: ಕನ್ನಡ ಭಾಷೆಯ ಬಗ್ಗೆ ಮಾತಾಡಲು ಕಮಲ್ ಹಾಸನ್ಗೆ ಇರೋ ಯೋಗ್ಯತೆಯಾದರೂ ಏನು? ನಾರಾಯಣಗೌಡ, ಕರವೇ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

