ಜನ ನೀಡುವ ಕಾಸಿನಿಂದಲೇ ಕಮಲ್ ಹಾಸನ್ ಒಬ್ಬ ನಟನಾಗಿ ಬೆಳೆದಿದ್ದು: ವಿ ಸೋಮಣ್ಣ, ಕೇಂದ್ರ ಸಚಿವ
ವಿವಾದದ ಬಗ್ಗೆ ಚಿತ್ರನಟ ಡಾ ಶಿವರಾಜಕುಮಾರ್ ಅವರು ಮೌನ ತಳೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಅವರ ಅರೋಗ್ಯದಲ್ಲಿ ಏರುಪೇರಾಗಿದೆ, ಡಾ ರಾಜ್ ಕುಮಾರ್ ಮತ್ತು ಶಿವಣ್ಣ ಅವರನ್ನು ಚಿಕ್ಕಂದಿನಿಂದ ನೋಡುತ್ತ ಬಂದಿರುವ ತನಗೆ ಆ ಕುಟುಂಬ ಹೇಗೆ ಅಂತ ಚೆನ್ನಾಗಿ ಗೊತ್ತು ಎಂದು ಹೇಳಿದರು. ಕನ್ನಡಿಗರು ಯಾವತ್ತೂ ಬೇರೆ ಭಾಷೆಗಳ ಬಗ್ಗೆ ಹಗುರವಾಗಿ ಮಾತಾಡಿಲ್ಲ ಎಂದು ಸೋಮಣ್ಣ ಹೇಳಿದರು.
ದೆಹಲಿ, ಮೇ 30: ದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು ಕನ್ನಡ ಭಾಷೆಯನ್ನು ಅವಹೇಳನ ಮಾಡುವ ಕಮಲ್ ಹಾಸನ್ರನ್ನು ಕೀಳು ಅಭಿರುಚಿ ಮತ್ತು ಕೆಟ್ಟ ಮನಸ್ಥಿತಿಯ ನಟ ಎಂದು ಹೇಳಿದರು. ಕಮಲ್ ಒಬ್ಬ ನಟ, ಅವರಲ್ಲಿ ಪ್ರತಿಭೆ ಇರಬಹುದು, ಅದರೆ ಒಬ್ಬ ನಟನಾಗಿ ಬೆಳೆದಿದ್ದು ಜನರು ಕೊಡುವ ಕಾಸಿನಿಂದ, ಕನ್ನಡ ಚಿತ್ರಗಳಲ್ಲೂ (Kannada movies) ನಟಿಸಿರುವ ಅವರಿಗೆ ಕನ್ನಡ ಭಾಷೆಯ ಬಗ್ಗೆ ಕಿಂಚಿತ್ತೂ ಕಾಳಜಿ ಮತ್ತು ಗೌರವವಿಲ್ಲ, ಅವರು ಮಾತಾಡಿದ್ದು ದುರಂತ ಮತ್ತು ದೌರ್ಬಲ್ಯದ ಪ್ರತೀಕ ಎಂದು ಸೋಮಣ್ಣ ಹೇಳಿದರು. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಅನೇಕ ಭಾಷೆಗಳಿಗೆ ಮತ್ತು ಪ್ರತಿ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ, ಸೊಗಡಿದೆ, ಹಾಗಾಗಿ ಭಾಷೆಗಳ ಬಗ್ಗೆ ಯಾರೂ ಹಗುರವಾಗಿ ಮಾತಾಡಬಾರದು ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ರಮ್ಯಾ ಕನ್ನಡ ಹೋರಾಟಗಾರರ ಬದಲು ಕಮಲ್ ಹಾಸನ್ಗೆ ಉಪದೇಶ ಮಾಡಲಿ: ಟಿಎ ನಾರಾಯಣಗೌಡ, ಕರವೇ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

