ಕುಟುಂಬದಲ್ಲಿ ನಡೆದ ಕಹಿಘಟನೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹತಾಷೆಗೆ ದೂಡಿರಬಹುದು: ವಿ ಸೋಮಣ್ಣ
ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯ ನಾಯಕನ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು, ಅವರು ಯಾರನ್ನು ತೃಪ್ತಿಪಡಿಸಲು ಹೀಗೆಲ್ಲ ಮಾತಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ, ಅದರೆ ಅವರ ಹತಾಷ ಮನಸ್ಥಿತಿ ತನಗೆ ಅರ್ಥವಾಗುತ್ತದೆ ಎಂದು ಸೋಮಣ್ಣ ಹೇಳಿದರು. ಆಪರೇಶನ್ ಸಿಂಧೂರ ಮೇಲೆ ವ್ಯತಿರಿಕ್ತವಾದ ಕಾಮೆಂಟ್ಗಳನ್ನು ಮಾಡಿದ ಹಿನ್ನೆಲೆ ಖರ್ಗೆ ವ್ಯಾಪಕ ಟೀಕೆಗೊಳಗಾಗಿದ್ದಾರೆ.
ಬಾಗಲಕೋಟೆ, ಮೇ 22: ಕೇಂದ್ರ ಸಚಿವ ವಿ ಸೋಮಣ್ಣ ಅವರು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಬಗ್ಗೆ ಅಪಾರವಾದ ಗೌರವ ಇದೆ ಅಂತ ಹೇಳುತ್ತಲೇ ಆಪರೇಷನ್ ಸಿಂಧೂರ ಕುರಿತು ನೀಡಿರುವ ಹೇಳಿಕೆಯನ್ನು ಟೀಕಿಸಿದರು. ಖರ್ಗೆ ಅವರು ಈ ದೇಶ ಕಂಡಿರುವ ದೊಡ್ಡ ನಾಯಕರಲ್ಲಿ ಒಬ್ಬರು, ಆದರೆ ಅವರು ಇತ್ತೀಚಿನ ದಿನಗಳಲ್ಲಿ ತುಂಬಾ ಹತಾಷರಾಗಿದ್ದಾರೆ, ಅವರ ನಿರಾಶಾದಾಯಕ ಮನಸ್ಥಿತಿಗೆ, ಅವರು ಅನುಭವಿಸುತ್ತಿರುವ ನೋವಿಗೆ, ಹಿಂದೆ ಅವರ ಕುಟುಂಬದಲ್ಲಿ ನಡೆದ ಕಹಿಘಟನೆ ಕಾರಣವಾಗಿರಬಹುದು, ಅವರಿಗೆ ಏನು ಮಾತಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ವಿಷಯದಲ್ಲಿ ಹೆಚ್ಚು ಮಾತಾಡಲಿಚ್ಛಿಸದ ಕೇಂದ್ರ ಸಚಿವ ವಿ ಸೋಮಣ್ಣ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ