ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಏನನ್ನೂ ಯೋಚಿಸಿಲ್ಲ : ವಿ ಸೋಮಣ್ಣ
ರಾಜ್ಯ ಗುತ್ತಿಗೆಗದಾರರು ಬಿಲ್ ಪಾವತಿಯಾಗದಿರುವ ಬಗ್ಗೆ ಮತ್ತು ಹಿಂದಿನ ಸರ್ಕಾರಕ್ಕಿಂತಲೂ ಈ ಸರ್ಕಾರದಲ್ಲಿ ಹೆಚ್ಚಿನ ಕಮೀಷನ್ಗೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಕಾಂಗ್ರೆಸ್ ಕುಮ್ಮಕ್ಕಿನಿಂದ ತಮ್ಮ ಸರ್ಕಾರದ ವಿರುದ್ಧ ವೃಥಾ ದೋಷಾರೋಪಣೆ ಮಾಡಿ ಅಧಿಕಾರದಿಂದ ಇಳಿಸಿದರು, ಈಗ ಕಾಂಗ್ರೆಸ್ ಸರ್ಕಾರವನ್ನೂ ಇಳಿಸುತ್ತಾರೆ ಎಂದರು.
ಹುಬ್ಬಳ್ಳಿ, ಏಪ್ರಿಲ್ 11: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ರಾಜ್ಯ ಸರ್ಕಾರವನ್ನು (state government) ಒಂದು ದಿವಾಳಿಯೆದ್ದ ಅಂಗಡಿಗೆ ಹೋಲಿಸಿ ಗೇಲಿ ಮಾಡಿದರು. ಸರ್ಕಾರದಲ್ಲಿ ಹಣವೇ ಇಲ್ಲ, ಜನರ ಒಂದು ಚಿಕ್ಕ ಸಮಸ್ಯೆಗೂ ಸ್ಪಂದಿಸುವ ಶಕ್ತಿಯನ್ನು ಸರ್ಕಾರ ಉಳಿಸಿಕೊಂಡಿಲ್ಲ ಎಂದು ಹೇಳಿದ ಸೋಮಣ್ಣ, ಬೇಸಿಗೆ ಬರುತ್ತಿದೆ ರಾಜ್ಯದ ಹಲವಾರು ಭಾಗಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ, ಸರ್ಕಾರ ಈ ನಿಟ್ಟಿನಲ್ಲಿ ಪರಿಹಾರ ಯೋಜನೆಗಳ ಬಗ್ಗೆ ಯೋಚಿಸಿಯೂ ಇಲ್ಲ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ಜನರ ಗಮನವನ್ನು ಬೇರೆಡೆ ತಿರುಗುಸುವಲ್ಲಿ ನಿಷ್ಣಾತರು ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ವಿಷಯದಲ್ಲಿ ಹೆಚ್ಚು ಮಾತಾಡಲಿಚ್ಛಿಸದ ಕೇಂದ್ರ ಸಚಿವ ವಿ ಸೋಮಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
