ಎಲೆಕೋಸು ಬೆಲೆ ದಿಢೀರ್ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ಭಾರೀ ಕುಸಿತದಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ನಾಶಪಡಿಸಿದ್ದಾರೆ. ಬೆಳಗಾವಿಯ ಕಡೋಲಿ ಗ್ರಾಮದಲ್ಲಿ ನಡೆದಿದೆ. ಕೆಜಿಗೆ 70-80 ಪೈಸೆ ಮಾತ್ರ ಬೆಲೆ ಸಿಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ನಷ್ಟದಿಂದಾಗಿ ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ್ದಾರೆ.
ಬೆಳಗಾವಿ, ಏಪ್ರಿಲ್ 11: ಎಲೆಕೋಸು (cabbage) ಬೆಲೆ ದಿಢೀರ್ ಕುಸಿತ ಹಿನ್ನೆಲೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ರೈತರು ನಾಶಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೆಜಿಗೆ 70 ರಿಂದ 80 ಪೈಸೆಗೆ ಮಾತ್ರ ಮಾರಾಟವಾಗುತ್ತಿದ್ದು, 10 ಕೆಜಿ ಕ್ಯಾಬೇಜ್ಗೆ ಕೇವಲ 7 ರೂ ಮಾತ್ರ ಸಿಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕುರಿಗಳನ್ನ ಬಿಟ್ಟು ರೈತರು ಬೆಳೆ ನಾಶ ಪಡಿಸಿದ್ದಾರೆ. ಮೊನ್ನೆಯಷ್ಟೇ ಡಿಸಿ ಕಚೇರಿ ಎದುರು ಕ್ಯಾಬೇಜ್ ಸುರಿದು ಅನ್ನದಾತರು ಆಕ್ರೋಶ ಹೊರ ಹಾಕಿದ್ದರು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
