ಅರ್ಧ ಶತಮಾನದಿಂದ ರಾಜಕಾರಣದಲ್ಲಿರುವ ಖರ್ಗೆಯನ್ನು ಸಿಎಂ ಮಾಡುವ ಮನಸ್ಸು ಕಾಂಗ್ರೆಸ್ಗೆ ಬರಲಿಲ್ಲ: ಕಾರಜೋಳ
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆದಾಗ ಡಾ ಬಿಅರ್ ಅಂಬೇಡ್ಕರ್ ಸೋಲುವಂತೆ ಮಾಡಿ ನಂತರ ಸಂಭ್ರಮಿಸಿದ್ದು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರೂ, ಚುನಾವಣೆಯಲ್ಲಿ ಅವರು ಎರಡೆರಡು ಬಾರಿ ಸೋಲುವಂತೆ ಮಾಡಲಾಯಿತು, ಭಾರತೀಯರು ಅದರಲ್ಲೂ ವಿಶೇಷವಾಗಿ ದಲಿತರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾರಜೋಳ ಹೇಳಿದರು.
ಬೆಂಗಳೂರು, ಏಪ್ರಿಲ್ 11: ಸಿದ್ದರಾಮಯ್ಯ ಸರ್ಕಾರದ (Siddaramaiah government) ವಿರುದ್ಧ ಬಿಜೆಪಿ ಪ್ರತಿಭಟನೆ ಮುಂದುವರಿದಿದೆ. ಇಂದು ಅಂಬೇಡ್ಕರ್ ಪ್ರತಿಮೆ ಮುಂದೆ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸಂಸದ ಗೋವಿಂದ ಕಾರಜೋಳ, ರಾಜ್ಯದ ಪ್ರಮುಖ ದಲಿತ ನಾಯಕ ಮತ್ತು ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡುವ ಅವಕಾಶಗಳಿದ್ದರೂ ಕಾಂಗ್ರೆಸ್ ಮಾಡಲಿಲ್ಲ, ನಿಜ ಹೇಳಬೇಕೆಂದರೆ ಡಾ ಬಿ ಅರ್ ಅಂಬೇಡ್ಕರ್ ಅವರಿಗೆ ಬಗೆದಂತೆ ಖರ್ಗೆ ಅವರಿಗೂ ದ್ರೋಹ ಬಗೆಯಲಾಗಿದೆ, ಖರ್ಗೆ ಎಐಸಿಸಿ ಅಧ್ಯಕ್ಷನಾಗಿರೋದು ನಾಮಕಾವಾಸ್ಥೆ, ಕಾರುಬಾರೆಲ್ಲ ಸೋನಿಯ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿಯವರದ್ದು ಎಂದು ಹೇಳಿದರು.
ಇದನ್ನೂ ಓದಿ: ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ