ಆರ್ಸಿಬಿ ಸೋತರೇನಂತೆ ಗುರೂ, ಡೆಲ್ಲಿಯ ರಾಹುಲ್ ಕೂಡ ನಮ್ಮ ಹುಡುಗ ತಾನೇ? ಆರ್ಸಿಬಿ ಅಭಿಮಾನಿಗಳು
ಕೆಲ ಅಭಿಮಾನಿಗಳು ರಜತ್ ಪಾಟೀದರ್ ತಂಡ ಸ್ಟ್ರಾಟಿಜಿಯನ್ನು ಬದಲಾಯಿಸಬೇಕು ಅನ್ನುತ್ತಾರೆ, ಪ್ರತಿ ಪಂದ್ಯಕ್ಕೆ ಒಂದೇ ಸ್ಟ್ರಾಟಿಜಿ ನಡೆಯಲ್ಲ ಅನ್ನೋದು ಅವರ ವಾದ. 163 ರನ್ ಮೊತ್ತ ತುಂಬಾ ಕಡಿಮೆ ಅಯ್ತು ಗುರೂ, ಕನಿಷ್ಠ 200 ರನ್ ಅದರೂ ಗಳಿಸಬೇಕಿತ್ತು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗೆ ಬ್ಯಾಟ್ ಮಾಡಬೇಕು ಅಂತ ರಾಹುಲ್ ತೋರಿಸಿಕೊಟ್ಟಿದ್ದಾನೆ ಅಂತ ಅಭಿಮಾನಿಯೊಬ್ಬರು ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 11: ನಿನ್ನೆ ರಾತ್ರಿ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ಲೋಕಲ್ ತಂಡ ಆರ್ಸಿಬಿ ಸೋತಿದಕ್ಕೆ ಅಭಿಮಾನಿಗಳ ಸಮರ್ಥನೆ ಚೆನ್ನಾಗಿದೆ ಮಾರಾಯ್ರೇ! ಪರ್ವಾಗಿಲ್ಲ, ನಮ್ಮ ಟೀಮ್ ಸೋತರೂ ಕೆಎಲ್ ರಾಹುಲ್ ಚೆನ್ನಾಗಿ ಅಡಿದ, ಅವ್ನೂ ನಮ್ಮ ಹುಡುಗನೇ ತಾನೇ ಅಂತಿದ್ದಾರೆ ಜನ. ಬೇರೆ ಕಡೆ ಚೆನ್ನಾಗಿ ಆಡಿ ಗೆಲ್ಲುತ್ತಿದ್ದಾರೆ, ಅದರೆ ಹೋಂ ಗ್ರೌಂಡ್ ನಲ್ಲಿ ಸೋಲ್ತಾ ಇದ್ದಾರೆ, ತೊಂದರೆ ಇಲ್ಲ, ಮುಂದಿನ ಪಂದ್ಯಗಳನ್ನು ಗೆಲ್ಲುತ್ತಾರೆ ಅಂತ ಕೆಲವರು ಹೇಳುತ್ತಾರೆ. ಆರ್ಸಿಬಿ ಗೆಲ್ಲಲಿ ಸೋಲಲಿ, ನಾವಂತೂ ಬೆಂಗಳೂರು ತಂಡದ ಅಭಿಮಾನಿಗಳು ಅಂತ ಯುವತಿಯರು ಹೇಳುತ್ತಾರೆ.
ಇದನ್ನೂ ಓದಿ: ‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ