ಚಿತ್ರದುರ್ಗ ಜಿಲ್ಲೆ ಹಾನಗಲ್ ಗ್ರಾಮದ ಹೊರಭಾಗದಲ್ಲಿ ಜೋಡಿ ಕರಡಿಗಳ ಓಡಾಟ, ಆತಂಕದಲ್ಲಿ ಜನ
ಚಿತ್ರದುರ್ಗ, ಕೊಪ್ಪಳ ಮತ್ತು ಬೇರೆ ಕೆಲ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಓಡಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವು ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುವುದು ನಿಜವಾದರೂ ಮಾನವರನ್ನ ಕಂಡರೆ ತಮ್ಮ ಅತ್ಮರಕ್ಷಣೆಗಾಗಿ ದಾಳಿ ನಡೆಸುತ್ತವೆ. ಹಾಗಾಗಿ, ಕರಡಿಗಳು ಊರಿನ ಸುತ್ತಮುತ್ತ ಕಂಡಾಗ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದೇ ಜಾಣ್ಮೆಯ ಕೆಲಸ.
ಚಿತ್ರದುರ್ಗ, ಏಪ್ರಿಲ್ 11: ಊರೊಂದರ ಹೊರವಲಯದ ವಿರಳ ವಾಹನ ಸಂಚಾರದ ರಸ್ತೆಯಲ್ಲಿ ನೀವು ವಾಹನದ ಮೇಲೆ ಜಾಲಿಯಾಗಿ ಹೊರಟಾಗ ಧುತ್ತನೆ ಜೋಡಿ ಕರಡಿ (pair of bears) ಎದುರಾದರೆ ಸ್ಥಿತಿ ಏನಾಗಬೇಡ? ಕರಡಿ ಮಾನವರ ಮೇಲೆ ದಾಳಿ ನಡೆಸುತ್ತವೆ ಮತ್ತು ಹಲವು ಸಂದರ್ಭಗಳಲ್ಲಿ ಅದು ಮಾರಣಾಂತಿಕವಾಗಿ ಪರಿಣಮಿಸಿದೆ. ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಗ್ರಾಮದ ಹೊರಭಾಗದಲ್ಲಿ ಎರಡು ಕರಡಿಗಳ ರಾಜಾರೋಷವಾಗಿ ತಿರುಗಾಡುತ್ತಿದ್ದು ಜನ ಅವುಗಳನ್ನು ಕಂಡು ಭಯಭೀತರಾಗಿದ್ದಾರೆ. ಕರಡಿಗಳನ್ನು ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು; ವಿಡಿಯೋಗೆ ಭಾರೀ ಮೆಚ್ಚುಗೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ