Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು; ವಿಡಿಯೋಗೆ ಭಾರೀ ಮೆಚ್ಚುಗೆ

ಹಿಮದಲ್ಲಿ ಸಿಲುಕಿದ್ದ ಕಂದು ಬಣ್ಣದ ಕರಡಿಯನ್ನು ಭಾರತೀಯ ಸೈನಿಕರು ರಕ್ಷಿಸಿದ್ದಾರೆ. ಟಿನ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದ ಹಿಮಾಲಯದ ಕಂದು ಕರಡಿ ಮರಿಯನ್ನು ಭಾರತೀಯ ಸೈನಿಕರು ಕಾಪಾಡಿರುವ ವಿಡಿಯೋಗೆ ಇಂಟರ್ನೆಟ್​ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಡಬ್ಬಿಯನ್ನು ತಲೆ ಸಿಲುಕಿಕೊಂಡಿದ್ದ ಹಿಮಾಲಯನ್ ಬ್ರೌನ್ ಕರಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಹಿಮದ ಪರ್ವತವನ್ನು ಏರಿದ್ದಾರೆ. ಪಾರುಗಾಣಿಕಾ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರಶಂಸೆ ಗಳಿಸಿದೆ.

Follow us
ಸುಷ್ಮಾ ಚಕ್ರೆ
|

Updated on: Dec 12, 2024 | 9:46 PM

ಹಿಮಾಲಯದ ಕಂದು ಕರಡಿ ಮರಿಯನ್ನು ಭಾರತೀಯ ಸೈನಿಕರು ರಕ್ಷಿಸಿದ್ದಾರೆ. ಹಿಮಭರಿತ ಪರ್ವತದ ಮೇಲೆ ಡಬ್ಬದಲ್ಲಿ ಕರಡಿಯ ತಲೆ ಸಿಲುಕಿಕೊಂಡಿತ್ತು. ಆ ಕರಡಿಯ ತಲೆಯನ್ನು ಹೊರಗೆ ತೆಗೆದು ಸೈನಿಕರು ಕಾಪಾಡಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಿಮಕರಡಿಯನ್ನು ತಲುಪಲು ಸೈನಿಕರು ಎಚ್ಚರಿಕೆಯಿಂದ ಚಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆರಂಭದಲ್ಲಿ, ಅವರು ಕೈಯಿಂದ ಡಬ್ಬಿಯನ್ನು ತೆಗೆದುಹಾಕಲು ಪ್ರಯತ್ನಿಸಿದರು. ಆದರೆ ಮರಿ ಗಾಯಗೊಳ್ಳಬಹುದೆಂದು ಅರಿತುಕೊಂಡ ಅವರು ಅದನ್ನು ಕತ್ತರಿಸಲು ಉಪಕರಣಗಳನ್ನು ಬಳಸಿದರು. ತಾಳ್ಮೆ ಮತ್ತು ಕಾಳಜಿಯಿಂದ ಅವರು ಕರಡಿಗೆ ಯಾವುದೇ ಹಾನಿಯಾಗದಂತೆ ಅದನ್ನು ರಕ್ಷಿಸಿದರು. ರಕ್ಷಣೆಯ ನಂತರ, ಸೈನಿಕರು ಮರಿಗೆ ಸ್ವಲ್ಪ ಆಹಾರವನ್ನು ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ