Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ನಗರದಲ್ಲಿ ಪೈಪ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದರೂ ಕ್ಯಾರೆ ಅನ್ನದ ನಗರಸಭೆ ಸಿಬ್ಬಂದಿ

ಕೊಪ್ಪಳ ನಗರದಲ್ಲಿ ಪೈಪ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದರೂ ಕ್ಯಾರೆ ಅನ್ನದ ನಗರಸಭೆ ಸಿಬ್ಬಂದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2025 | 3:28 PM

ಇದು ನಿಜಕ್ಕೂ ನಿರ್ಲಕ್ಷ್ಯತನದ ಪರಮಾವಧಿ. ಕಡು ಬೇಸಿಗೆಯಲ್ಲಿ ನೀರು ಹೀಗೆ ಪೋಲಾಗುತ್ತಿರೋದು ಕ್ರಿಮಿನಲ್ ಅಪರಾಧ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ನಗರಸಭೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪೈಪನ್ನು ದುರಸ್ತಿ ಮಾಡದಿರುವುದು ಅಚ್ಚರಿ ಮೂಡಿಸುತ್ತದೆ. ಅಥವಾ ಅವರ ಗಮನಕ್ಕೆ ಬಂದಿಲ್ಲ ಅಂತಾದರೆ ಸ್ಥಳೀಯರ ಪೈಕಿ ಯಾರಾದರೊಬ್ಬರು ಕಾರ್ಪೋರೇಶನ್​ಗೆ ಫೋನ್ ಮಾಡಿದರೂ ಆಗುತ್ತಿತ್ತು.

ಕೊಪ್ಪಳ, ಏಪ್ರಿಲ್ 11: ಬೇಸಿಗೆ ಅಂತಲ್ಲ ಮತ್ತು ಉತ್ತರ ಕರ್ನಾಟಕ (north Karnataka) ಅಂತಲೂ ಅಲ್ಲ; ಪ್ರತಿ ಪ್ರದೇಶದಲ್ಲಿ ಮತ್ತು ಎಲ್ಲ ಕಾಲಗಳಲ್ಲಿ ನೀರಿನ ಪ್ರತಿಹನಿ ಅಮೂಲ್ಯ. ರಾಜ್ಯದ ನಾನಾಭಾಗಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆದರೆ ಇಲ್ಲಿ ನೋಡಿ, ತುಂಗಭದ್ರಾ ಜಲಾಶಯದಿಂದ ಕೊಪ್ಪಳ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರು ಪೈಪ್ ಒಡೆದ ಕಾರಣ ಆಳೆತ್ತರಕ್ಕೆ ಚಿಮ್ಮುತ್ತಾ ಪೋಲಾಗುತ್ತಿದೆ. ಬುದ್ಧಿವಂತರ್ಯಾರೋ ಒಂದು ಡ್ರಮ್ ಇಟ್ಟು ನೀರು ತುಂಬಿಸಿಕೊಂಡಿದ್ದಾರೆ. ಅದರೆ ನಗರಸಭೆಯವರಿಗೆ ಮಾತ್ರ ಬುದ್ಧಿ ಬಂದಿಲ್ಲ.

ಇದನ್ನೂ ಓದಿ:  ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಜನರಿಗೆ ಗುಡ್​ನ್ಯೂಸ್: ನೀರಾವರಿ ಸಮಿತಿ ಮಹತ್ವದ ತೀರ್ಮಾನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ