ಕೇಂದ್ರಕ್ಕೆ ಪವರ್ ಇಲ್ಲ…ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಖಡಕ್ ಮಾತು
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಡಿ.ಕೆ.ಶಿವಕುಮಾರ್, ಇವತ್ತಿನ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಅಧಿಕೃತವಾಗಿ ಈ ಸಂಬಂಧ ಆದೇಶ ಹೊರ ಬೀಳಲಿದೆ. ಇನ್ಮುಂದೆ ರಾಮನಗರ ಹೆಡ್ ಕ್ವಾಟ್ರಸ್ ಆಗಿರಲಿದೆ ಎಂದು ಎಂದರು.
ಬೆಂಗಳೂರು, (ಮೇ 22): ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಡಿ.ಕೆ.ಶಿವಕುಮಾರ್, ಇವತ್ತಿನ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಅಧಿಕೃತವಾಗಿ ಈ ಸಂಬಂಧ ಆದೇಶ ಹೊರ ಬೀಳಲಿದೆ. ಇನ್ಮುಂದೆ ರಾಮನಗರ ಹೆಡ್ ಕ್ವಾಟ್ರಸ್ ಆಗಿರಲಿದೆ ಎಂದು ಎಂದರು. ಇನ್ನು ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಅನುಮತಿ ಬೇಕಾ ಎನ್ನುವ ಬಗ್ಗೆ ಪತ್ರಕರ್ತರ ಪ್ರಶ್ನಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಇಲ್ಲ ಕೇಂದ್ರ ಸರ್ಕಾರಕ್ಕೆ ಯಾವುದೇ ಪವರ್ ಇಲ್ಲ. ಇದು ನಮ್ಮ ಹಕ್ಕು. ಬದಲಾವಣೆ ಸಂಬಂಧ ಒಂದು ಮಾತು ತಿಳಿಸುವುದು ಇತ್ತು ತಿಳಿಸಿದ್ದೇವೆ ಅಷ್ಟೇ. ನಾಳೆ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಅಧಿಕೃತ ಗೆಜೆಟ್ ಹೊರಡಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದರು.