‘ಕಮಲ್ ಹಾಸನ್ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ ಸಿಂಹ
ತಮಿಳಿನ ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಕುರಿತು ನೀಡಿದ ಹೇಳಿಕೆಯಿಂದ ಕನ್ನಡದ ಜನರಿಗೆ ನೋವಾಗಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಹ ಕಮಲ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ನಟ ವಸಿಷ್ಠ ಸಿಂಹ ಅವರು ಈ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಕಮಲ್ ಹಾಸನ್ (Kamal Haasan) ಅವರು ಕನ್ನಡದ ಬಗ್ಗೆ ನೀಡಿದ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಕನ್ನಡದ ಸೆಲೆಬ್ರಿಟಿಗಳು ಕೂಡ ಕಮಲ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ನಟ ವಸಿಷ್ಠ ಸಿಂಹ (Vasishta Simha) ಅವರು ಈ ಕುರಿತು ಮಾತನಾಡಿದ್ದಾರೆ. ‘ಪ್ರೀತಿ ಇದ್ದ ಕಡೆ ಗೌರವ, ಕ್ಷಮೆ ಕೂಡ ಇರಬೇಕು. ಕ್ಷಮೆ ಕೇಳಿದ್ದರೆ ಅವರು ದೊಡ್ಡವರಾಗುತ್ತಿದ್ದರು. ನಾವೆಲ್ಲ ಅವರನ್ನು ಇಷ್ಟಪಡುತ್ತೇವೆ. ನಾವೆಲ್ಲ ಅವರ ಅಭಿಮಾನಿಗಳು. ಬೇಡದ ಜಾಗದಲ್ಲಿ ಬೇಡದ ಮಾತನ್ನು ಆಡಿದಾಗ ಅದಕ್ಕೆ ಬೆಲೆ ತರಬೇಕು. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಕಮಲ್ ಹಾಸನ್ ಮಾಡಿದ್ದು ತಪ್ಪು. ಅದನ್ನು ನಾವು ಒಪ್ಪೋಕೆ ಆಗಲ್ಲ’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.